ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕೊಳಚಿಕಂಬಳದಲ್ಲಿ ಮನೆ ಬಾಗಿಲು ಒಡೆದು ನಗದು ಲೂಟಿ

ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳಚಿಕಂಬಳ 'ಮಂತ್ರ' ಸರ್ಫಿಂಗ್ ಕ್ಲಬ್ ಬಳಿಯ ಮನೆಯಲ್ಲಿ ಶುಕ್ರವಾರ ರಾತ್ರಿ ಕಳ್ಳತನ ನಡೆದಿದೆ.

ಸ್ಥಳೀಯ ನಿವಾಸಿ ಪುರುಷೋತ್ತಮ ಸುವರ್ಣ ಅವರ ಮನೆ ಹಿಂಬಾಗಿಲನ್ನು ಒಡೆದು ಕಳ್ಳರು ನಗ- ನಗದಿಗಾಗಿ ಜಾಲಾಡಿದ್ದು, 8 ಸಾವಿರಕ್ಕೂ ಅಧಿಕವಿದ್ದ ನಗದನ್ನು ಎಗರಿಸಿದ್ದಾರೆ.

ಯಾರೋ ಗೊತ್ತಿದ್ದವರೇ ಕಳವು ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಸಮೀಪದಲ್ಲಿ ಮಂತ್ರ ಸರ್ಫಿಂಗ್ ಕ್ಲಬ್ ನ ಸಿಸಿ ಕ್ಯಾಮೆರಾವಿದ್ದು ಪರಿಶೀಲಿಸಲಾಗುತ್ತಿದೆ.

ಮುಲ್ಕಿ ಠಾಣೆ ವ್ಯಾಪ್ತಿಯ ಹಳೆಯಂಗಡಿ, ತೋಕೂರು, ಮುಲ್ಕಿ ಬಸ್ ನಿಲ್ದಾಣ ಪರಿಸರದಲ್ಲಿ ಕೆಲ ತಿಂಗಳ ಹಿಂದೆ ಹಲವು ಕಳ್ಳತನ ನಡೆದಿದ್ದು, ಆರೋಪಿಗಳನ್ನು ಹಿಡಿದು ವಿಚಾರಣೆ ನಡೆಸುತ್ತಿರುವಾಗಲೇ ಮತ್ತೊಂದು ಕಳ್ಳತನ ನಡೆದಿದ್ದರಿಂದ ಸ್ಥಳೀಯರು ಭೀತಿಗೊಂಡಿದ್ದಾರೆ.

Edited By : Shivu K
Kshetra Samachara

Kshetra Samachara

18/12/2021 12:29 pm

Cinque Terre

12.37 K

Cinque Terre

0