ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಧ್ಯರಾತ್ರಿ ಮನೆಗಳ ಬಾಗಿಲು ಬಡಿಯುತ್ತಿದ್ದ ಯುವಕ ವಶಕ್ಕೆ: ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು

ಉಡುಪಿ: ಮಾನಸಿಕ ಅಸ್ವಸ್ಥ ಯುವಕನೋರ್ವ ಮಧ್ಯರಾತ್ರಿ ಆದಿಉಡುಪಿ ಪರಿಸರದಲ್ಲಿ ಸಾರ್ವಜನಿಕರ ಮನೆಗಳ ಬಾಗಿಲು ಬಡಿದು ಭಯದ ವಾತಾವರಣ ನಿರ್ಮಿಸಿದ್ದ. ಜೊತೆಗೆ ಕಬ್ಬಿಣದ ರಾಡ್ ಹಾಗೂ ಬಾಟಲಿ ಹಿಡಿದು ಸಾರ್ವಜನಿಕ ರಸ್ತೆಯಲ್ಲಿ ಜನರಲ್ಲಿ ಭೀತಿ ಹುಟ್ಟಿಸಿದ್ದ.ಈ ಯುವಕನ ಬಗ್ಗೆ ಮಾಹಿತಿ ಪಡೆದ ವಿಶು ಶೆಟ್ಟಿ ಅಂಬಲಪಾಡಿ, ನಗರ ಠಾಣೆ ಪೊಲೀಸರ ಸಹಾಯದಿಂದ ವಶಕ್ಕೆ ಪಡೆದು ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.

ನಿಂಗರಾಜು (22) ಎಂಬ ಈ ಯುವಕ ಮೂಲತಃ ಬಳ್ಳಾರಿಯವನು. ಕೂಲಿ ಕೆಲಸಕ್ಕೆ ಉಡುಪಿಗೆ ಬಂದ ಈತ ಮಾನಸಿಕ ರೋಗಿಯಾಗಿದ್ದಾನೆ. ಯುವಕನ ಬಳ್ಳಾರಿಯ ಸಂಬಂಧಿಕರು ವಿಶು ಶೆಟ್ಟಿಯವರ ಸಂಪರ್ಕಕ್ಕೆ ಸಿಕ್ಕಿದ್ದು ಕೂಡಲೇ ಉಡುಪಿಗೆ ದಾವಿಸುವುದಾಗಿ ತಿಳಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

11/12/2021 02:11 pm

Cinque Terre

25.7 K

Cinque Terre

1