ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಸಂಕದಗುಂಡಿ ಎಂಬಲ್ಲಿ ಟ್ಯಾಂಕರ್‌ಗಳಿಂದ ಡೀಸೆಲ್ ಕಳವು ಮಾಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಮಡಿಕೇರಿಯ ಮಾರ್ದಾಳ ನಿವಾಸಿ ಕಿರಣ್(32), ಪುತ್ತೂರಿನ ಮಹಮ್ಮದ್ ಮುಸ್ತಾಫ್(34), ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆಯವಾರಾದ ಅಶೋಕ್(30), ರೂಪೇಶ್ ಪೂಜಾರಿ(27) ಹಾಗೂ ಶಿರೂರು ಅಳ್ವೆಗದ್ದೆಯ ಮೋಹನ ಪೂಜಾರಿ(42) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳಿಂದ ಒಟ್ಟು 4 ಕ್ಯಾನ್ ಗಳಲ್ಲಿದ್ದ 6500ರೂ. ಮೌಲ್ಯದ ಸುಮಾರು 73 ಲೀಟರ್ ಡೀಸೆಲ್ ವಶಪಡಿಸಿಕೊಳ್ಳಲಾಗಿದೆ.ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
11/12/2021 02:02 pm