ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ರಾಮ್ ಸೇನಾ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ: ದೂರು ದಾಖಲು

ಉಡುಪಿ: ವಾಹನದ ಇನ್ಸೂರೆನ್ಸ್ ನೆಪದಲ್ಲಿ ಉಡುಪಿಯ ರಾಜಾಂಗಣಕ್ಕೆ ಕರೆಸಿಕೊಂಡ ದುಷ್ಕರ್ಮಿಗಳು ರಾಮ್ ಸೇನಾ ಕಾರ್ಯಕರ್ತನ ಹಲ್ಲೆ ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ರಾಮ್ ಸೇನಾ ಸಂಘಟನೆಯ ಕಾರ್ಯಕರ್ತ ಬಸವರಾಜ್( 35) ಹಲ್ಲೆಗೊಳಗಾದವರು. ಈ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಿಸಿರುವ ರಾಮ್ ಸೇನಾ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು ,ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದವರನ್ನು ಕೂಡಲೇ ಬಂದಿಸಬೇಕು.

ಇಲ್ಲದಿದ್ದಲ್ಲಿ ಉಡುಪಿ, ದ. ಕ ಜಿಲ್ಲೆ ಯ ರಾಮ್ ಸೇನಾ ಕಾರ್ಯಕರ್ತರು ತೀವ್ರವಾದ ಹೋರಾಟವನ್ನು ಸಂಘಟನೆ ವತಿಯಿಂದ ಹಮ್ಮಿಕೊಳ್ಳುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲ್ಲೆ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Edited By : Nagesh Gaonkar
Kshetra Samachara

Kshetra Samachara

10/12/2021 03:42 pm

Cinque Terre

8.97 K

Cinque Terre

0

ಸಂಬಂಧಿತ ಸುದ್ದಿ