ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಕ್ಕಾರು: ಕಲ್ಲಿನ ಕ್ವಾರಿಗೆ ಎನ್‌ಕ್ವೈರಿ ನಾಟಕ!- ಸ್ಥಳೀಯರ ಪ್ರಶ್ನೆಗೆ ಅಧಿಕಾರಿಗಳ ನಿರುತ್ತರ

ಮಂಗಳೂರು: ನಗರ ಹೊರವಲಯದ ಕಟೀಲು ಸಮೀಪದ ಬಡಗಎಕ್ಕಾರಿನಲ್ಲಿ ಕೆಲವು ವರ್ಷಗಳಿಂದ ಅಕ್ರಮ ಕಲ್ಲಿನ ಕ್ವಾರಿ ದಂಧೆ ನಡೆಯುತ್ತಿದ್ದು, ಈ ಬಗ್ಗೆ ಸ್ಥಳೀಯರು ಅನೇಕ ಬಾರಿ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನಡುವೆ ನಿನ್ನೆ (ಗುರುವಾರ) ರಾಜ್ಯ ಸರಕಾರದ ಸ್ವಾಮ್ಯಕ್ಕೊಳಪಟ್ಟ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸೇರಿದ ವಾಹನದಲ್ಲಿ(KA-19.G. 650) ಅಕ್ರಮ ನಡೆಯುತ್ತಿರುವ ಸ್ಥಳಕ್ಕೆ ಬಂದ ಅಧಿಕಾರಿಗಳು ದಾಳಿ ನಡೆಸುವ ನೆಪದಲ್ಲಿ ʼನಾಟಕʼ ಆಡಿ ಸ್ಥಳೀಯರ ಪ್ರಶ್ನೆಗೆ ಉತ್ತರಿಸದೇ ಪಲಾಯನ ಮಾಡಿದ್ದಾರೆ.

ಅಧಿಕಾರಿ ಮಹಾಶಯರು ಅಕ್ರಮ ಕ್ವಾರಿ ನಡೆಯುವ ಸ್ಥಳಕ್ಕೆ ಬಂದಿದ್ದರೂ ಆಗ ಕೋರೆ ಯಥಾವತ್ತಾಗಿಯೇ ಚಾಲ್ತಿಯಲ್ಲಿತ್ತು!

ಅಧಿಕಾರಿಗಳು ಒಂದು ವೇಳೆ ರಿಯಲ್‌ ದಾಳಿ ಮಾಡಿದ್ದರೆ ಕೆಲಸಗಾರರು ಕೆಲಸ ಸ್ಥಗಿತಗೊಳಿಸಿ, ಅಲ್ಲಿಂದ ತಪ್ಪಿಸಿಕೊಂಡು ಹೋಗುತ್ತಿದ್ದರು. ಆದರೆ, ಕ್ವಾರಿ ಕೆಲಸ ನಡೆಯುತ್ತಿದ್ದ ದೃಶ್ಯವನ್ನು ಸಾರ್ವಜನಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಅಂದಮೇಲೆ ಅಧಿಕಾರಿಗಳು ಸರಕಾರಿ ವಾಹನದಲ್ಲಿಯೇ ಕ್ವಾರಿ ಮಾಲೀಕರಿಂದ ಮಾಮೂಲಿ ವಸೂಲಿ ಮಾಡಲೇ ಬಂದಿರುವ ಅನುಮಾನ ಸಾರ್ವಜನಿಕರಿಗೆ ಮೂಡಿದೆ.

ಭ್ರಷ್ಟ್ರಾಚಾರ ಮುಕ್ತ ಆಡಳಿತ, ಸ್ವಚ್ಛ ಆಡಳಿತ ಎಂದು ಹೇಳುವ ಮುಲ್ಕಿ- ಮೂಡುಬಿದಿರೆಯ ಶಾಸಕರ ಕ್ಷೇತ್ರದಲ್ಲೇ ಅಕ್ರಮ ನಡೆಯುತ್ತಿರುವುದು ವಿಪರ್ಯಾಸ. ಕೂಡಲೇ ಶಾಸಕರು ಈ ಬಗ್ಗೆ ಕಾರ್ಯಪ್ರವೃತ್ತರಾಗಿ ಈ ಅಕ್ರಮಕ್ಕೆ ಕಡಿವಾಣ ಹಾಕಬೇಕೆಂಬುದು ಸ್ಥಳೀಯ ನಾಗರಿಕರ ಆಗ್ರಹ.

Edited By : Vijay Kumar
Kshetra Samachara

Kshetra Samachara

10/12/2021 10:02 am

Cinque Terre

6.99 K

Cinque Terre

0

ಸಂಬಂಧಿತ ಸುದ್ದಿ