ಮಂಗಳೂರು: ನಗರದ ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ನಾಲ್ಕು ಮನೆಗೆ ನುಗ್ಗಿ ಕಳವುಗೈದಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು 16.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿದ್ದಾರೆ.
ತಮಿಳುನಾಡು ಕೊಯಮತ್ತೂರಿನ ಕುರುಮೊಕ್ಕೈನ ಅಲಂಗೊಂಬು ನಿವಾಸಿ ರಾಜನ್ ಚಿನ್ನತಂಬಿ(57), ಬೆಂಗಳೂರಿನ ಚಂದ್ರಾಪುರದ ಕೀರ್ತಿ ಲೇಔಟ್ ನಿವಾಸಿ ಪಿ.ಬಿ.ಪ್ರಮೋದ್ ಬಂಧಿತರು. ರಾಜನ್ ಚಿನ್ನತಂಬಿ ನಗರದ ಹೆಚ್.ಪಿ.ಸಿ.ಎಲ್. ಪ್ಲಾಂಟ್ ಬಳಿ ಓಡಾಡುತ್ತಿದ್ದ. ಈತನ ಬಗ್ಗೆ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಆತ ಸುರತ್ಕಲ್ ಪರಿಸರದ ಕುಳಾಯಿ, ಕಾನ, ಹೊಸಬೆಟ್ಟು, ಕಡಂಬೋಡಿ ಎಂಬಲ್ಲಿ ಮನೆ ಕಳವು ನಡೆಸಿರುವುದು ಪತ್ತೆಯಾಗಿದೆ. ತಕ್ಷಣ ಆರೋಪಿಯನ್ನು ಬಂಧಿಸುರುವ ಪೊಲೀಸರು, ಪಿ.ಬಿ ಪ್ರಮೋದ್ ಎಂಬಾತನಿಗೆ ಸೇರಿದ ಲಕ್ಷ್ಮೀ ಕೇರಳ ಮೆಸ್ ನ ರೂಮಿನಲ್ಲಿ ಆರೋಪಿ ರಾಜನ್ ಬಚ್ಚಿಟ್ಟಿದ್ದ ಚಿನ್ನದ ಒಡವೆ ಸ್ವಾಧೀನಪಡಿಸಿದ್ದಾರೆ. ಈ ಸಂದರ್ಭ ಆರೋಪಿ ಪಿ.ಬಿ ಪ್ರಮೋದ್ ನನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ರಾಜನ್ ಕಳವುಗೈದಿರುವ ಚಿನ್ನದ ಒಡವೆಗಳ ಪೈಕಿ ಮಣಪುರಂ ಫೈನಾನ್ಸ್ ನಲ್ಲಿ ಅಡವು ಇರಿಸಿರುವ ಚಿನ್ನದ ಒಡವೆಗಳನ್ನು ವಶಪಡಿಸಿರುವುದಲ್ಲದೆ, ಆರೋಪಿ ರಾಜನ್ ನ ತಮಿಳುನಾಡಿನಲ್ಲಿರುವ ಮನೆಯಲ್ಲಿ ಬಚ್ಚಿಟ್ಟಿದ್ದ ಚಿನ್ನದೊಡವೆ ವಶ ಪಡಿಸಿ ಕೊಳ್ಳಲಾಗಿದೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
09/12/2021 08:54 pm