ಕುಂದಾಪುರ: ಮೊಬೈಲ್ ವಾಟ್ಸ್ ಆ್ಯಪ್ ಗೆ ಬಂದ ದೊಡ್ಡ ಮೊತ್ತದ ಬಹುಮಾನದ ಸಂದೇಶಕ್ಕೆ ಮೋಸ ಹೋದ ಯುವತಿ 5 ಲಕ್ಷ ರೂ. ಮೊತ್ತವನ್ನು ಕಳೆದುಕೊಂಡ ಪ್ರಕರಣ ಸೆನ್ ಠಾಣೆಯಲ್ಲಿ ದಾಖಲಾಗಿದೆ.
ಕುಂದಾಪುರ ವಂಡ್ಸೆಯ ಕೈಕಾಣ ನಿವಾಸಿ ಅನುಷಾ ಅವರಿಗೆ ಆಗಸ್ಟ್‌ನಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಉದ್ಯೋಗ ನೀಡುವುದಾಗಿ ಜಿ ಮೇಲ್ ಸಂದೇಶ ಬಂದಿತ್ತು. ಆ ಮೊಬೈಲ್ ಸಂಖ್ಯೆಯನ್ನು ಅನುಷಾ ಸಂಪರ್ಕಿಸಿದರು. ಉದ್ಯೋಗದ ಕ್ಲಿಯರೆನ್ಸ್ ಮತ್ತು ಇತರ ಖರ್ಚುಗಳಿಗೆಂದು 65,000 ರೂ.ವನ್ನು ಅಪರಿಚಿತ ವ್ಯಕ್ತಿಗಳ ಗೂಗಲ್ ಪೇ ಸಂಖ್ಯೆಗೆ ಪಾವತಿಸಬೇಕೆಂದರು. ಅನಂತರ 25 ಲಕ್ಷ ರೂ. ಬಹುಮಾನ ಗೆದ್ದಿದ್ದೀರಿ ಎಂಬ ಸಂದೇಶ ಬಂತು. ಈ ಸಂದೇಶದ ಬಳಿಕ ಅಪರಿಚಿತರ ಸೂಚನೆಯಂತೆ ಅನುಷಾ ಅವರು ಗೂಗಲ್ ಪೇ ಮೂಲಕ ಅಪರಿಚಿತರ ಬ್ಯಾಂಕ್ ಖಾತೆಗೆ 5,01,540 ರೂ. ಪಾವತಿಸಿದ್ದರು.
ಅಪರಿಚಿತರು ಉದ್ಯೋಗ ಮತ್ತು ಬಹುಮಾನ ಗೆದ್ದಿದ್ದೀರಿ ಎಂದು ನಂಬಿಸಿ ವಂಚಿಸಿದ್ದಾರೆ ಎಂದು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅನುಷಾ ದೂರು ನೀಡಿದ್ದಾರೆ.
Kshetra Samachara
06/12/2021 11:36 am