ಉಡುಪಿ: ಉಡುಪಿ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಟರ್, ತನ್ನ ಸಹೋದ್ಯೋಗಿಯ ಮೊಬೈಲನ್ನು ಕಳ್ಳತನ ಮಾಡಿ ಗೂಗಲ್ ಪೇ ಮೂಲಕ 78000 ರೂ. ಡ್ರಾ ಮಾಡಿ ವಂಚಿಸಿದ ಬಗ್ಗೆ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪ್ರವೀಣ್ ಮತ್ತು ರಘು ವೈ. ಎಸ್. ಹೊಟೇಲಿನಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದರು. ಸಹೋದ್ಯೋಗಿ ರಘು ಎಂಬಾತ ನನ್ನ ಮೊಬೈಲ್ ಕಳ್ಳತನ ಮಾಡಿ, ಗೂಗಲ್ ಪೇ ಮೂಲಕ 78 ಸಾವಿರ ರೂ. ಖರ್ಚು ಮಾಡಿರುವುದಾಗಿ ನಂದಳಿಕೆಯ ಪ್ರವೀಣ್ ದೂರು ನೀಡಿದ್ದಾರೆ.
ಮೊಬೈಲ್ ಕಳ್ಳತನ ಮಾಡಿದ ರಘು ಮಂಡ್ಯದವನಾಗಿದ್ದು ಪರಾರಿಯಾಗಿದ್ದಾನೆ. ಈತ 55000 ರೂ. ಮೌಲ್ಯದ ಚಿನ್ನಾಭರಣ ಮತ್ತು ಬಾರ್ ಬಿಲ್ಲನ್ನು ಗೂಗಲ್ ಪೇ ಮೂಲಕ ಪಾವತಿಸಿ ನನ್ನ ಖಾತೆಯಿಂದ ಹಣ ಖರ್ಚು ಮಾಡಿದ್ದಾಗಿ ಪ್ರವೀಣ್ ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದು, ಖದೀಮ ರಘು ತಲೆಮರೆಸಿಕೊಂಡಿದ್ದಾನೆ.
Kshetra Samachara
06/12/2021 11:07 am