ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ನೇಣು ಬಿಗಿದುಕೊಂಡು ಯುವತಿ ಮೃತ್ಯು; ಪ್ರೇಮ ವೈಫಲ್ಯ ಶಂಕೆ?

ಮಂಗಳೂರು: ನಗರದ ಆಕಾಶಭವನ ನಿವಾಸಿ ಯುವತಿ ನೇಣು ಕುಣಿಕೆಗೆ ಕೊರಳೊಡ್ಡಿ ಮೃತಪಟ್ಟಿದ್ದಾರೆ. ಆಕಾಶಭವನ ಕಾಪಿಗುಡ್ಡೆಯ ಶಿಫಾಲಿ(22) ಮೃತಪಟ್ಟವರು.

ಆಕಾಶಭವನದಲ್ಲಿ ಬ್ಯೂಟಿಶಿಯನ್ ಆಗಿ ವೃತ್ತಿ ನಿರ್ವಹಿಸುತ್ತಿದ್ದ ಶಿಫಾಲಿ ಸಂಜೆ ಕೆಲಸ ಮುಗಿಸಿ ಎಂದಿನಂತೆ ಮನೆಗೆ ಬಂದಿದ್ದಾರೆ. ಆದರೆ, ಅದೇನಾಯ್ತೋ ಗೊತ್ತಿಲ್ಲ, ಮನೆಗೆ ಬಂದವರೇ ಕೋಣೆಗೆ ತೆರಳಿ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯವರು ಆಕೆಯನ್ನು ರಕ್ಷಣೆ ಮಾಡುವಷ್ಟರಲ್ಲಿ ಮೃತಪಟ್ಟಿದ್ದರು.

ಶಿಫಾಲಿ, ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

04/12/2021 09:56 am

Cinque Terre

14 K

Cinque Terre

1