ಉಡುಪಿ: ನಿನ್ನೆ ಸಂಜೆ ಪರ್ಕಳದಲ್ಲಿ ನಡೆದ ಅಪಘಾತವೊಂದಕ್ಕೆ ಸಂಬಂಧಿಸಿ ಹಿಂದೂ-ಮುಸ್ಲಿಂ ಕಾರ್ಯಕರ್ತರು ಮಣಿಪಾಲ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಪ್ರಸಂಗ ನಡೆದಿದೆ.
ನಿನ್ನೆ ಸಂಜೆ ಪರ್ಕಳ ಪೇಟೆಯ ಸರ್ಕಲ್ ಬಳಿ ಅಪಘಾತ ಸಂಭವಿಸಿತ್ತು. ಪರ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತ್ರಾಡಿಯ ಅರ್ಶದ್ ಎಂಬವರು ತನ್ನ ಬಲೆನೋ ಕಾರನ್ನು ಚಲಾಯಿಸಿಕೊಂಡು ಬರುವಾಗ ಬೇರೊಂದು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಈ ಸಂದರ್ಭ ವಡಭಾಂಡೇಶ್ವರದ ಕೌನ್ಸಿಲರ್ ಯೋಗೀಶ್ ಎಂಬವರು ಸಂಧಾನ ನಡೆಸಿದ್ದರು. ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದಿದೆ.
ಬಳಿಕ ಕೌನ್ಸಿಲರ್ ಅಲ್ಲಿಂದ ತೆರಳಿದ್ದಾರೆ.
ಈ ವೇಳೆ ಅರ್ಶದ್ ತನ್ನ ಸ್ನೇಹಿತರಿಗೆ ಕರೆ ಮಾಡಿ ಕರೆಸಿಕೊಂಡು, ಮಣಿಪಾಲ ಠಾಣೆಗೆ ಆಗಮಿಸಿದ್ದಾರೆ. ಸುಮಾರು ಇಪ್ಪತ್ತು ಮಂದಿ ಯುವಕರ ತಂಡ ಮಣಿಪಾಲ ಠಾಣೆಗೆ ದೂರು ನೀಡಲು ಬಂದ ವಿಷಯ ತಿಳಿದು ಹಿಂದೂ ಸಂಘಟನೆ ಕಾರ್ಯಕ್ರರ್ತರೂ ಠಾಣೆ ಎದುರು ಜಮಾಯಿಸಿದಾಗ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಸದ್ಯ ಮಣಿಪಾಲ ಠಾಣೆಯಲ್ಲಿ ದೂರು- ಪ್ರತಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
Kshetra Samachara
29/11/2021 08:56 am