ಹೆಬ್ರಿ: ಹೆಬ್ರಿ ತಾಲೂಕಿನ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ದುರಂತದಲ್ಲಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ ದಾರುಣ ಘಟನೆ ಇಂದು ನಡೆದಿದೆ.
ಮುಳ್ಳುಗುಡ್ಡೆ ಸಮೀಪದ ಭಟ್ರಾಡಿ ಹೊಳೆಯಲ್ಲಿ ಈಜಲು ಹೋದ ಹಿರಿಯಡ್ಕ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮೃತರನ್ನು ಸುದರ್ಶನ್ (16), ಸೋನಿತ್ (17) ಹಾಗೂ ಕಿರಣ್ (16 ) ಎಂದು ಗುರುತಿಸಲಾಗಿದೆ. ಸ್ಥಳೀಯರ ಸಹಕಾರದಿಂದ ಮೃತದೇಹಗಳನ್ನು ಮೇಲಕ್ಕೆತ್ತಲಾಗಿದೆ.
ಹೆಬ್ರಿ ತಹಸೀಲ್ದಾರ್ ಪುರಂದರ, ಕಂದಾಯ ನಿರೀಕ್ಷಕ ಹಿತೇಶ್, ಪಿಎಸ್ಐ ಮಹೇಶ್, ಮುಖಂಡರಾದ ಸುರೇಶ್ ಶೆಟ್ಟಿ ಶಿವಪುರ, ರಮೇಶ್ ಪೂಜಾರಿ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸುತ್ತಿದ್ದಾರೆ. ಗ್ರಾಮಸ್ಥರು ಜಮಾಯಿಸಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.
Kshetra Samachara
26/11/2021 01:41 pm