ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಲೆಮರೆಸಿಕೊಂಡಿದ್ದ ಆರೋಪಿಯ ಅರೆಸ್ಟ್

ಬಜಪೆ: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿನಲ್ಲಿ ಬಿಡುಗಡೆಗೊಂಡು ಕಳೆದ ಆರು ವರ್ಷಗಳ ಹಿಂದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.

ಗದಗ ಮೂಲದ ನಿವಾಸಿ ರಾಮಚಂದ್ರಪ್ಪ ಹುಲಿಗೆಮ್ಮನವರ (60) ಬಂಧಿತ ಆರೋಪಿ. ಹದಿಮೂರು ವರ್ಷಗಳ ಹಿಂದೆ ಬಜಪೆ ಠಾಣಾ ವ್ಯಾಪ್ತಿಯ ತೆಂಕುಳಿ ಪಾಡಿ ಗ್ರಾಮದ ಪೊಳಲಿ ದ್ವಾರದ ಬಳಿಯ ಪೆಟ್ರೋಲ್ ಪಂಪ್ ನಲ್ಲಿ ಗಣನಾಥ ಶೆಟ್ಟಿ,ಸುರೇಶ್ ಹಾಗೂ ರಾಮಚಂದ್ರ ಜತೆ ಸೇರಿ ತಲವಾರಿನಿಂದ ಜಗದೀಶ್ ಮತ್ತು ಪ್ರೀತಂ ಎಂಬುವವರ ಮೇಲೆ ಹಲ್ಲೆ ನಡೆಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಮಚಂದ್ರಪ್ಪ ಹುಲಿಗೆಮ್ಮನವರ ನ್ಯಾಯಾಲಯದ ಮುಂದೆ ಹಾಜರಾಗದೇ ಸುಮಾರು ಆರು ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಪತ್ತೆಯ ಬಗ್ಗೆ ಬಲೆ ಬಿಸಿದ ಬಜಪೆ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಮತ್ತು ಅವರ ತಂಡವು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ಪತ್ತೆಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಬಜಪೆ ಠಾಣಾ ವ್ಯಾಪ್ತಿಯಲ್ಲಿ ಕಳೆದ ಐದು ತಿಂಗಳಿನಲ್ಲಿ ಸುಮಾರು ಏಳು ದೀರ್ಘವಾಗಿ ಉಳಿದ ಪ್ರಕರಣಗಳನ್ನು ಪತ್ತೆಹಚ್ಚಿ ಹಿರಿಯ ಪೊಲೀಸ್ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ IPS ಅವರ ಮಾರ್ಗದರ್ಶನದಂತೆ ಡಿಸಿಪಿ ಹರಿರಾಮ್ ಶಂಕರ(ಕಾ.ಸು)ದಿನೇಶ್ ಕುಮಾರ್(ಅ.ಸಂ)ಅವರ ನಿರ್ದೇಶನದಂತೆ ಮಂಗಳೂರು ಉಪ ವಿಭಾಗದ ಎಸಿಪಿ ಎಸ್.ಮಹೇಶ್ ಕುಮಾರ್ ಅವರ ನೇತೃತ್ವದಲ್ಲಿ ಬಜಪೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ,ಪಿ ಎಸ್ ಐ ಪೂವಪ್ಪ,ಪ್ರೊ.ಪಿ.ಎಸ್ ಐ ಅರುಣ್ ಕುಮಾರ್,ಎ ಎಸ್ ಐ ರಾಮಣ್ಣ,ಸಂತೋಷ,ಹೊನ್ನಪ್ಪ,ರಶೀದ ಶೇಖ,ಸುಜನ್,ಸಂಜೀವ ಭಜಂತ್ರಿ,ಸಿದ್ದಲಿಂಗಯ್ಯ ಹಾಗೂ ಮುತ್ತಣ್ಣ ಪತ್ತೆಕಾರ್ಯದಲ್ಲಿ ಸಹಕರಿಸಿದ್ದರು.

Edited By : Nirmala Aralikatti
Kshetra Samachara

Kshetra Samachara

16/11/2021 08:10 pm

Cinque Terre

15.82 K

Cinque Terre

0