ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲಿ ಮಾನಸಿಕ ಅಸ್ವಸ್ಥರ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಚಾರಣಾಧೀನ ಕೈದಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.ಕುಂದಾಪುರದ ನವೀನ್ (31) ಆತ್ಮಹತ್ಯೆಗೆ ಯತ್ನಿಸಿದಾತ.
ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ನವೀನ್, ವೆನ್ಲಾಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಇಂದು ಸಂಜೆ ಈತ ಆಸ್ಪತ್ರೆ ಕಿಟಕಿಗೆ ಬೆಡ್ ಶೀಟ್ ಕಟ್ಟಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಗಮನಿಸಿದ ಆಸ್ಪತ್ರೆಯವರು ಆತನನ್ನು ರಕ್ಷಿಸಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಶಿಕ್ಷಕಿಯೋರ್ವರು ತನಗೆ ಮಾಟ ಮಾಡಿಸಿದ್ದಾರೆಂದು ಗ್ರಹಿಸಿ ಆತ ಸೆ.20ರಂದು ನಗರದ ಕೊಡಿಯಾಲ್ ಬೈಲ್ನಲ್ಲಿರುವ ಡಯಟ್ ಶಿಕ್ಷಣ ಸಂಸ್ಥೆಗೆ ನುಗ್ಗಿ ಮೂವರು ಮಹಿಳೆಯರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ. ತಕ್ಷಣ ನವೀನ್ ನನ್ನು ಬಂಧಿಸಿದ ಪೊಲೀಸರು, ಈತ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ವೆನ್ಲಾಕ್ ಗೆ ದಾಖಲಿಸಿದ್ದರು.
Kshetra Samachara
08/11/2021 07:48 pm