ಬಜಪೆ: ಇತ್ತೀಚಿನ ದಿನಗಳಲ್ಲಿ ಜನರು ಒಂದಲ್ಲ ಒಂದು ರೀತಿಯಲ್ಲಿ ಮೋಸ ಹೋಗುತ್ತಲೇ ಇದ್ದಾರೆ .ಮುಖ್ಯವಾಗಿ ಕೆಲ ಸಂಘ ಸಂಸ್ಥೆ,ಆಶ್ರಮಗಳ ಹೆಸರು ಹೇಳಿಕೊಂಡು ಸಹಾಯ ಹಸ್ತ ಮಾಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳನ್ನು ಹಬ್ಬಿಸಿ ಕರೆಗಳನ್ನು ಮಾಡುತ್ತಿರುವುದು ಕಂಡುಬರುತ್ತಲೇ ಇರುದನ್ನು ನಾವು ದಿನಂಪ್ರತಿ ನೋಡಬಹುದು.ಇಂತಹ ಮೋಸದ ಜಾಲಗಳಿಗೆ ಹೆಚ್ಚಿನ ಜನರು ಬಲಿಯಾಗುತ್ತಲೇ ಇದ್ದಾರೆ.ಈ ಬಗ್ಗೆ ಯಾವುದೇ ಸಂಘ ಸಂಸ್ಥೆ ಹಾಗೂ ಆಶ್ರಮಗಳಿಗೆ ಸಹಾಯ ಹಸ್ತ ಮಾಡುವ ಮುನ್ನ ಹೆಚ್ಚಿನ ಜಾಗರೂಕತೆಯನ್ನು ವಹಿಸಬೇಕಾಗಿದೆ.ಸಂಘ ಸಂಸ್ಥೆ ಆಶ್ರಮಗಳಿಗೆ ಸಹಾಯ ಮಾಡುವ ಮುಂಚೆ ವಿವರವಾದ ಮಾಹಿತಿಯನ್ನು ಪಡೆದುಕೊಳ್ಳಬೇಕು.ಈ ಬಗ್ಗೆ ಜನರು ಹೆಚ್ಚಿನ ಜಾಗರೂಕತೆಯನ್ನು ವಹಿಸಬೇಕು ಎಂದು ಸ್ವರಕ್ಷಾ ಫಾರ್ ವುಮೇನ್ ಟ್ರಸ್ಟ್ (ರಿ)ನ ಸಂಸ್ಥಾಪಕ ಕಾರ್ತಿಕ್ ಎಸ್ ಕಟೀಲ್ ಹೇಳಿದ್ದಾರೆ.ಈ ಬಗ್ಗೆ ಅವರು ಕಳೆದ ಕೆಲವು ತಿಂಗಳುಗಳಿಂದ ಹಲವು ವಿಡೀಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಜನರಿಗೆ ಹೆಚ್ಚಿನ ಜಾಗ್ರತೆಯ ಸಂದೇಶವನ್ನು ಹರಿಯಬಿಟ್ಟಿದ್ದಾರೆ.
ಯಾವುದೇ ಟ್ರಸ್ಟ್,ಸಂಘ ಸಂಸ್ಥೆ ಹಾಗೂ ಆಶ್ರಮಗಳಿಗೆ ಸಹಾಯ ಹಸ್ತ ಮಾಡುವುದು ಒಂದು ಉತ್ತಮ ಕಾರ್ಯ.ಆದರೆ ಸಹಾಯ ಮಾಡುದಕ್ಕಿಂತ ಮೊದಲು ಪರಿಶೀಲಿಸಬೇಕು.ಇಂತಹ ಅನೇಕ ಮೋಸದ ಜಾಲಗಳು ದಿನೇ ದಿನೇ ಹೆಚ್ಚಾಗುತ್ತಲೇ ಇದೆ.ಇಂತಹ ಮೋಸದ ಜಾಲಗಳಿಗೆ ಜನರು ಬಲಿಯಾಗದಿರಿ ಎಂದು ಕಾರ್ತಿಕ್ ಎಸ್ ಕಟೀಲ್ ಅವರು ಎಚ್ಚರಿಕೆಯ ಸಂದೇಶವನ್ನು ಸಾರಿದ್ದಾರೆ.
Kshetra Samachara
21/10/2021 09:33 pm