ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: 20 ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಹಳೆ ಕಾರಿನೊಳಗಡೆ ಪತ್ತೆ!

ಮೂಡುಬಿದಿರೆ: 20 ದಿನಗಳ ಹಿಂದೆ ನಾಪತ್ತೆಯಾಗಿದ್ದ ವೃದ್ಧರೊಬ್ಬರ ಶವ ಜ್ಯೋತಿನಗರ ಗಾಂಧಿ ಪಾರ್ಕ್ ಬಳಿ ನಿಲ್ಲಿಸಲಾಗಿದ್ದ ಹಳೆ ಕಾರಿನೊಳಗಡೆ ಇಂದು ಮಧ್ಯಾಹ್ನ ಪತ್ತೆಯಾಗಿದೆ!

ಪುರಸಭೆ ವ್ಯಾಪ್ತಿಯ ಕರಿಂಜೆ ಗ್ರಾಮ ನಿವಾಸಿ ಶ್ರೀಧರ ಶೆಟ್ಟಿ(73) ಸೆಪ್ಟೆಂಬರ್ 29ರಂದು ನಾಪತ್ತೆಯಾಗಿದ್ದರು. ಈ ಬಗ್ಗೆ ಶ್ರೀಧರ ಶೆಟ್ಟಿ ಅವರ ಮಗ ರೋಹಿತ್ ಶೆಟ್ಟಿ ಅಕ್ಟೋಬರ್ 6ರಂದು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇಂದು ಜ್ಯೋತಿನಗರ ಮೆಸ್ಕಾಂ ಪರಿಸರದಲ್ಲಿ ದುರ್ವಾಸನೆ ಹರಡಿದ್ದು, ಸ್ಥಳೀಯರು ಕಾರಿನೊಳಗಡೆ ಶವ ಇರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಧಾವಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

Edited By : Manjunath H D
Kshetra Samachara

Kshetra Samachara

20/10/2021 03:35 pm

Cinque Terre

11.46 K

Cinque Terre

0