ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಸವಲತ್ತು ಪಡೆಯಲು ಬಂದ ವಿಕಲಚೇತನ ಮಹಿಳೆಯ ಪರ್ಸ್ ಎಗರಿಸಿದ ಕಳ್ಳರು

ಬಂಟ್ವಾಳ: ಬಂಟ್ವಾಳ ಶಾಸಕರ ಕಚೇರಿಗೆ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಒದಗಿಸಲಾಗುವ ದ್ವಿಚಕ್ರ ವಾಹನ ಸವಲತ್ತು ಪಡೆಯಲು ಆಗಮಿಸಿದ ಮಹಿಳೆಯೋರ್ವರ ಪರ್ಸ್ ಕಳವು ಮಾಡಿದ ಘಟನೆ ಶನಿವಾರ ನಡೆದಿದ್ದು, ಈ ಕುರಿತು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರ್ಸ್ ಕದ್ದ ಕಳ್ಳರು ಬಳಿಕ ಬಾರ್ ಎಂಡ್ ರೆಸ್ಟೋರೆಂಟ್ ನಲ್ಲಿ ಹಣವನ್ನು ಖರ್ಚು ಮಾಡಿ, ಅಲ್ಲಿ ಪರ್ಸ್ ಬಿಟ್ಟು ಪರಾರಿಯಾಗಿದ್ದಾರೆ.

ವಿಟ್ಲ ಪಡ್ನೂರು ನಿವಾಸಿ ಯಶೋಧ ಬಿ ಅವರು ಶಾಸಕ ರಾಜೇಶ್ ನಾಯ್ಕ್ ಅವರ ಕೈಯಿಂದ ದ್ವಿಚಕ್ರವಾಹನದ ಕೀಲಿ ಕೈ ಪಡೆಯುವ ವೇಳರ ತನ್ನ ಪರ್ಸ್ ನ್ನು ಅಲ್ಲೇ ಕೆಳಗೆ ಇಟ್ಟಿದ್ದರು.ಆದರೆ ವಾಹನ ಕೀ ಪಡೆದು ನೋಡುವಷ್ಟರಲ್ಲಿ ಪರ್ಸ್ ಮಾಯವಾಗಿತ್ತು. ಪರ್ಸ್ ನಲ್ಲಿ ನಗದು ಹಣ ಹಾಗೂ ಎ.ಟಿ.ಎಂ.ಕಾರ್ಡ್ ಇತ್ತು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಇಬ್ಬರು ವ್ಯಕ್ತಿಗಳು ಪರ್ಸ್ ಕಳವು ಮಾಡುವ ದೃಶ್ಯ ಶಾಸಕರ ಕಚೇರಿ ಯ ಸಿ.ಸಿ.ಕ್ಯಾಮರಾ ದಲ್ಲಿ ಸೆರೆಯಾಗಿದೆ. ಫಲಾನುಭವಿಗಳಿಗೆ ಕೀಲಿ ಕೈ ಕೊಡುವ ಸಂದರ್ಭದಲ್ಲಿ ಹೊಂಚು ಹಾಕಿ ಪರ್ಸ್ ಕಳವು ಮಾಡಿ ಪರಾರಿಯಾಗಿದ್ದಾರೆ. ಈ ಪರ್ಸ್ ಇಲ್ಲಿನ ಬಾರ್ ಎಂಡ್ ರೆಸ್ಟೋರೆಂಟ್ ಒಂದರಲ್ಲಿ ಸಿಕ್ಕಿದ್ದು, ಅದರೊಳಗೆ ಇದ್ದ ನಗದು ಹಣ ಹಾಗೂ ಎಟಿಎಂ ಕಾರ್ಡ್ ಕಾಣೆಯಾಗಿದೆ, ಕೇವಲ ಪರ್ಸ್ ಮಾತ್ರ ಬಿಟ್ಟು ಹೋಗಿದ್ದು , ಕಳ್ಳರಿಗಾಗಿ ಪೋಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

16/10/2021 05:04 pm

Cinque Terre

10.09 K

Cinque Terre

0

ಸಂಬಂಧಿತ ಸುದ್ದಿ