ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಅರಣ್ಯಾಧಿಕಾರಿಗಳಿಗೆ ಮಾಹಿತಿ ರವಾನೆ ಶಂಕೆ; ಮಹಿಳೆಗೆ ಹಲ್ಲೆ

ಬೈಂದೂರು: ಅರಣ್ಯಾಧಿಕಾರಿಗಳಿಗೆ ಮಾಹಿತಿ ರವಾನೆ ಮಾಡಿದ್ದಾರೆ ಎಂಬ ಕಾರಣಕ್ಕೆ ಮಹಿಳೆಗೆ ಹಲ್ಲೆ ನಡೆಸಿದ ಘಟನೆ ಬೈಂದೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕುಂಜಳ್ಳಿ ನಿವಾಸಿ ಸವಿತಾ ಶೆಟ್ಟಿ ಹಲ್ಲೆಗೊಳಗಾದ ಮಹಿಳೆ.

ಕೆಲವು ದಿನಗಳ ಹಿಂದೆ ಕಡವೆ ಕೊಂದು, ಮಾಂಸ ಸಾಗಿಸುತ್ತಿದ್ದಾಗ ಆರೋಪಿಗಳ ಬಂಧನವಾಗಿತ್ತು. ಮಾಂಸ ಸಾಗಾಟ ಮಾಡುವಾಗಲೇ ರೆಡ್ ಹ್ಯಾಂಡ್ ಆಗಿ ಆರೋಪಿಗಳು ಸಿಕ್ಕಿಬಿದ್ದಿದ್ದರು. ಬೈಂದೂರಿನಿಂದ ಕುಂಜಳ್ಳಿಗೆ ಹೋಗುವ ರಸ್ತೆಯ ಮಾರ್ಗ ಮಧ್ಯೆ ಇಲಾಖೆ ಕಾರ್ಯಾಚರಣೆ ನಡೆಸಿ ಯಡ್ತರೆ ನಿವಾಸಿ ಮಮ್ಮಿಶಾಹ್ ಫೈಜಲ್, ನಿಜಾಮುದ್ದೀನ್ ಎಂಬಿಬ್ಬರು ಆರೋಪಿಗಳನ್ನು ಬಂಧಿಸಿತ್ತು. ಕೃತ್ಯದಲ್ಲಿ ಭಾಗಿಯಾಗಿದ್ದ ಹೆರಿಯಣ್ಣ ಶೆಟ್ಟಿ, ಪ್ರವೀಣ್ ಶೆಟ್ಟಿ ಮತ್ತಿತರರು ತಪ್ಪಿಸಿಕೊಂಡಿದ್ದರು.

ಕಡವೆ ಮಾಂಸದ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂಬ ಕಾರಣಕ್ಕೆ ಸವಿತಾ ಶೆಟ್ಟಿ ಮೇಲೆ ಹಲ್ಲೆ ನಡೆಸಲಾಗಿದ್ದು,

ಗಾಯಗೊಂಡ ಸವಿತಾ ಶೆಟ್ಟಿ‌ ಬೈಂದೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

12/10/2021 11:50 am

Cinque Terre

13.82 K

Cinque Terre

2

ಸಂಬಂಧಿತ ಸುದ್ದಿ