ಬೆಳ್ತಂಗಡಿ: ದಿನವೂ ಒಂದಿಲ್ಲೊಂದು ಒಂದು ಕಡೆಗಳಲ್ಲಿ ಆನ್ ಲೈನ್ ವಂಚನೆ ಪ್ರಕರಣಗಳು ವರದಿಯಾಗುತ್ತಲೇ ಇದೆ. ಇದೀಗ ಕುಂಕುಮದ ಬದಲಿಗೆ ಮರದ ತುಂಡುಗಳು ಬಂದಿರುವ ಬಗ್ಗೆ ದೂರು ದಾಖಲಾಗಿದೆ.
ಬೆಳ್ತಂಗಡಿ ತಾಲೂಕು ಕಚೇರಿಯ ಡಾಟಾ ಎಂಟ್ರಿ ಉದ್ಯೋಗಿ ಮೂಲತಃ ಸುಳ್ಯ ನಿವಾಸಿ ಪ್ರವೀಣ್ ಕುಮಾರ್ ಅವರು ಅಮೆಜಾನ್ ನಲ್ಲಿ 200 ರೂ. ಮೌಲ್ಯದ ಕುಂಕುಮಕ್ಕೆ ಆರ್ಡರ್ ಮಾಡಿದ್ದಾರೆ. ಇಂದು ಅವರಿಗೆ ಪಾರ್ಸೆಲ್ ತಲುಪಿದ್ದು, ಅವರು ಪಾರ್ಸೆಲ್ ತೆರೆದಾಗ ಶಾಕ್ ಕಾದಿದೆ. ಅವರಿಗೆ ಕುಂಕುಮದ ಬದಲಿಗೆ ಮರದ ತುಂಡುಗಳು ಸಿಕ್ಕಿದೆ!
ಇದೀಗ ಅವರು ಮರದ ತುಂಡಿರುವ ಬಾಕ್ಸ್ ಅನ್ನು ವಾಪಸ್ ಅಮೆಜಾನ್ ಸಂಸ್ಥೆಗೆ ಹಿಂದಿರುಗಿಸಲು ನಿರ್ಧರಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
Kshetra Samachara
11/10/2021 10:11 pm