ಮಂಗಳೂರು: ನಗರದ ಮೋರ್ಗನ್ಸ್‌ಗೇಟ್‌ನಲ್ಲಿರುವ ವೈಷ್ಣವಿ ಕಾರ್ಗೊ ಸಂಸ್ಥೆಯ ಮುಂಭಾಗದಲ್ಲಿ ಅ.5ರಂದು ನಡೆದಿರುವ ಶೂಟೌಟ್ ಪ್ರಕರಣದ ಆರೋಪಿ ರಾಜೇಶ್ ಪ್ರಭುವನ್ನು ಭಾನುವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ವೈಷ್ಣವಿ ಕಾರ್ಗೊ ಸಂಸ್ಥೆಯ ಮಾಲಕ ರಾಜೇಶ್ ಪ್ರಭು ಹಾಗೂ ಇಬ್ಬರು ನೌಕರರೊಂದಿಗೆ ವೇತನದ ವಿಚಾರದಲ್ಲಿ ವಾಗ್ವಾದ ನಡೆದಿತ್ತು. ಈ ಸಂದರ್ಭ ರಾಜೇಶ್ ಪ್ರಭು ತಮ್ಮ ಪಿಸ್ತೂಲ್‌ನಿಂದ ಹಾರಿಸಿರುವ ಗುಂಡು ಆತನ ಪುತ್ರ ಸುಧೀಂದ್ರನ ತಲೆಗೆ ಹೊಕ್ಕಿತ್ತು. ಪರಿಣಾಮವಾಗಿ ಸುಧೀಂದ್ರ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
Kshetra Samachara
11/10/2021 12:01 am