ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರಿನಲ್ಲಿ ನೇಪಾಳ ಮೂಲದ ಮಹಿಳೆ ನಾಪತ್ತೆ

ಮಂಗಳೂರು: ನಗರದಲ್ಲಿ ಕಳೆದ 3 ವರ್ಷಗಳಿಂದ ಪತಿ ಹಾಗೂ ಮಗನೊಂದಿಗೆ ವಾಸಿಸುತ್ತಿದ್ದ ನೇಪಾಳ ಮೂಲದ ಮಹಿಳೆಯೊಬ್ಬರು ನಾಪತ್ತೆಯಾಗಿದ್ದಾರೆಂದು ಆಕೆಯ ಪತಿ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ನೇಪಾಳ ಮೂಲದ ಉಮೇಶ್ ಬೊಹರಾ ಎಂಬವರ ಪತ್ನಿ ಸೀತಾ ಬೊಹರಾ ನಾಪತ್ತೆಯಾದ ಮಹಿಳೆ. ಉಮೇಶ್ ಬೊಹರಾ ಮಂಗಳೂರಿನಲ್ಲಿ ಸೆಕ್ಯೂರಿಟಿ ವೃತ್ತಿ ನಿರ್ವಹಿಸುತ್ತಿದ್ದು, ಪತ್ನಿ ಸೀತಾ ಬೊಹರಾ ಮನೆಗೆಲಸ ಮಾಡುತ್ತಿದ್ದರು. ಸೀತಾ ಬೊಹರಾ ಸೆ.27 ರಂದು ಮಧ್ಯಾಹ್ನ ಸುಮಾರು 1.30 - 2 ಗಂಟೆ ಸುಮಾರಿಗೆ ಮನೆಗೆಲಸಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದರು. ಆದರೆ ಈವರೆಗೆ ಮನೆಗೆ ವಾಪಸ್ ಬಂದಿಲ್ಲ. ಈ ಬಗ್ಗೆ ಸಂಬಂಧಿಕರಲ್ಲಿ ಹಾಗೂ ಕೆಲಸ ಮಾಡುವ ಸ್ಥಳಗಳಲ್ಲಿ ವಿಚಾರಿಸಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಆಕೆಯ ಪತಿ ಉಮೇಶ್ ಬೊಹರಾ ದೂರಿನಲ್ಲಿ ತಿಳಿಸಿದ್ದಾರೆ‌.

ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

30/09/2021 10:47 pm

Cinque Terre

10.27 K

Cinque Terre

0