ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿಯಲ್ಲಿ ಹೆಲ್ಮೆಟ್ ಕಳ್ಳತನ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಕಿನ್ನಿಗೋಳಿ ಬಸ್ಸು ನಿಲ್ದಾಣದ ಬಳಿಯ ಮೈ ಚಾಯ್ಸ್ ಬಟ್ಟೆ ಅಂಗಡಿಯ ಎದುರುಗಡೆ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಎಂಬವರು ತುರ್ತು ಕೆಲಸದ ನಿಮಿತ್ತ ಬೈಕ್ ಪಾರ್ಕಿಂಗ್ ಮಾಡಿ ಹೋಗಿದ್ದು ವಾಪಸ್ ಬರುವಾಗ ಬೈಕ್ ಮೇಲೆ ಇರಿಸಿದ್ದ ಹೆಲ್ಮೆಟ್ ಕಾಣೆಯಾಗಿದೆ
ಕೂಡಲೇ ಅವರು ಈ ಬಗ್ಗೆ ಮೈ ಚಾಯ್ಸ್ ಅಂಗಡಿಯ ಸಿಸಿ ಕ್ಯಾಮೆರಾ ಮುಖಾಂತರ ಪರಿಶೀಲಿಸಿದಾಗ ಸುಮಾರು 30ರಿಂದ 40 ವರ್ಷ ಪ್ರಾಯದ ವ್ಯಕ್ತಿಯೊಬ್ಬ ಏಕಾಏಕಿ ಬಂದು ಹೆಲ್ಮೆಟ್ ಕದಿಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಕಿನ್ನಿಗೋಳಿಯಲ್ಲಿ ದ್ವಿಚಕ್ರವಾಹನಗಳ ಕಳವು ಪ್ರಕರಣ ನಡೆದಿದ್ದು ಇದೀಗ ಹೆಲ್ಮೇಟ್ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ.
ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಪರಿಸರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು ಸಾರ್ವಜನಿಕರು ಜಾಗೃತರಾಗಬೇಕು ಹಾಗೂ ಮುಲ್ಕಿ ಪೊಲೀಸರು ಕಳ್ಳರನ್ನು ಕೂಡಲೇ ಪತ್ತೆ ಹಚ್ಚಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Kshetra Samachara
27/09/2021 06:44 pm