ಮಂಗಳೂರು: ಮಂಗಳೂರಿನ ಮರೋಳಿ ಶೆಡ್ ನಲ್ಲಿ ಯಮುನಾ ಅರ್ಥ್ ಮೂವರ್ಸ್ ನವ್ರು ಅಕ್ರಮವಾಗಿ ದಾಸ್ತಾನು ಮಾಡಿದ 15000 ಲೀಟರ್ ಪೆಟ್ರೋಲಿಯಂ ಉತ್ಪನ್ನಗಳನ್ನು ಹಾಗೂ ಟ್ಯಾಂಕರ್ ನ ಟ್ಯಾಂಕ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಯಾವುದೇ ಪರವಾನಿಗೆ ಹಾಗೂ ದಾಖಲೆಗಳು ಇಲ್ಲದೇ ಇದ್ದು ಒಬ್ಬ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದ್ದು ಕಂಕನಾಡಿ ನಗರ ಠಾಣೆಯಲ್ಲಿ ಯಮೂನ ಅರ್ಥ್ ಮೂವರ್ಸ್ ನ ಮಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರ ಒಟ್ಟು ಮೌಲ್ಯ 12.5 ಲಕ್ಷ ಆಗಿದೆ. ಈ ಅಕ್ರಮದ ಬಗ್ಗೆ ತನಿಖೆ ನಡೆಸಲು ತೀರ್ಮಾನಿಸಲಾಗಿದೆ.
Kshetra Samachara
16/09/2021 09:43 pm