ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಆಟಿಕೆ ಸಾಮಗ್ರಿಯಲ್ಲಿ 10.55 ಲಕ್ಷ ರೂ. ಮೌಲ್ಯದ ಚಿನ್ನ ಸಾಗಾಟ- ಓರ್ವ ವಶಕ್ಕೆ

ಮಂಗಳೂರು: ಆಟಿಕೆ ಸಾಮಗ್ರಿಯೊಳಗಡೆ ಬಚ್ಚಿಟ್ಟು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿರುವ ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳು ಓರ್ವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಹುಸೈನ್ ರಾಜಿ ಮೊಯಿದಿನ್ ಅಬೂಬಕ್ಕರ್ (26) ಬಂಧಿತ. ಆರೋಪಿ ಹುಸೈನ್ ರಾಜಿ ಮೊಯಿದಿನ್ ಅಬೂಬಕ್ಕರ್ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ. ಈ ವೇಳೆ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಆಗ ಈತ ತನ್ನಲ್ಲಿದ್ದ 2 ಆಟಿಕೆ ಸಾಮಾಗ್ರಿ ಸೆಟ್​​ನಲ್ಲಿ ಚಿನ್ನ ಅಡಗಿಸಿ ಅಕ್ರಮವಾಗಿಬಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

ಈತನಲ್ಲಿ 24 ಕ್ಯಾರೆಟ್ ಪರಿಶುದ್ಧತೆಯ 219 ಗ್ರಾಂ ಚಿನ್ನ ಪತ್ತೆಯಾಗಿದೆ. ಇದರ ಮೌಲ್ಯ ರೂ 10,55,580 ರೂ. ಎಂದು ಅಂದಾಜಿಸಲಾಗಿದೆ. ಚಿನ್ನ ಮತ್ತು ಪ್ರಯಾಣಿಕ ಹುಸೈನ್ ರಾಜಿ ಮೊಯಿದಿನ್ ಅಬೂಬಕ್ಕರ್​​ನನ್ನು ವಶಕ್ಕೆ ಪಡೆದುಕೊಂಡ ಕಸ್ಟಮ್ಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Edited By : Vijay Kumar
Kshetra Samachara

Kshetra Samachara

14/09/2021 10:05 pm

Cinque Terre

8.54 K

Cinque Terre

0