ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಡ್ಡೋಡಿ: ನೆಲ್ಲಿತೀರ್ಥ ಹಾಗೂ ಅರಸುಪದವು ಅಕ್ರಮ ಕಲ್ಲು ಗಣಿಗಾರಿಕೆಗೆ ಬ್ರೇಕ್ ಹಾಕಲು ಆಗ್ರಹ

ಮೂಡಬಿದ್ರೆ: ನಿಡ್ಡೋಡಿ ಸಮೀಪದ ನೆಲ್ಲಿತೀರ್ಥ ಹಾಗೂ ಅರಸು ಪದವು ಬಳಿ ಕಳೆದ ಸರಿ ಸುಮಾರು 10 ವರ್ಷಗಳಿಂದ ಅಕ್ರಮ ಕಲ್ಲು ಗಣಿಗಾರಿಕೆ ದಂಧೆಯನ್ನು ವಿರೋಧಿಸುತ್ತಾ ಬಂದ ನಾಗರಿಕರು ಸ್ಥಳೀಯ ಆಡಳಿತ ಅವ್ಯವಸ್ಥೆ ಯಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಸ್ಥಳೀಯ ನಾಗರಿಕರು ಅನೇಕ ಬಾರಿ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿ ದೂರು ನೀಡಿದರೂ ಜಿಲ್ಲಾಡಳಿತದಿಂದ ಯಾವುದೇ ಕ್ರಮ ಜರಗಲಿಲ್ಲ

ಗಣಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ದಾಳಿ ಮಾಡದೆ ಇರುವುದು ಹಾಸ್ಯಾಸ್ಪದ ಎಂದು ಸ್ಥಳೀಯ ನಾಗರಿಕರು ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ

ಇನ್ನು ಸರಕಾರಿ ಸ್ವಾಧಿನದ ಕಂಪನಿಗಳನ್ನು ಖಾಸಗೀಕರಣ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟ ಜನಪ್ರತಿನಿಧಿಗಳು ಇದನ್ನು ಬಿಡುವರೆ ಖಂಡಿತಾ ಬಿಡಲ್ಲ. ಹಾಗಂತ ಜಿಲ್ಲಾಡಳಿತ, ಸ್ಥಳಿಯಾಡಳಿತ ಗ್ರಾಮಸ್ಥರ ಗೋಳು.ಕೇಳದಿರುವುದು ವಿಪರ್ಯಾಸ, ಜನರ ತೆರಿಗೆ ಹಣದಿಂದ ಸರಕಾರಿ ವೇತನ ಪಡೆಯುವ ಅಧಿಕಾರಿಗಳು, ಅಕ್ರಮ ಕಲ್ಲು ಗಣಿಗಾರಿಕೆ ತಡೆಗಟ್ಟದೆ ಯಾವುದೇ ದಂಡನೆ ವಿಧಿಸದೆ ಸರಕಾರದ ಖಜಾನೆಗೆ ಅಧಿಕಾರಿಗಳೇ ವಂಚನೆ ಮಾಡುತ್ತಿರುವ ಆರೋಪ ಸ್ಥಳೀಯ ನಾಗರಿಕರ ಮಾತುಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜಿಲ್ಲಾಡಳಿತ ಮೌನವಾಗಿದೆ.

Edited By : Nagaraj Tulugeri
Kshetra Samachara

Kshetra Samachara

13/09/2021 09:45 am

Cinque Terre

11.72 K

Cinque Terre

1