ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ವೃದ್ಧ ನಾಪತ್ತೆ ದೂರು

ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿಯ ಶಾಂತಿ ಪಲ್ಕೆಯಿಂದ ವೃದ್ಧರೊಬ್ಬರು ನಾಪತ್ತೆಯಾದ ಬಗ್ಗೆ ಮುಲ್ಕಿ ಠಾಣೆಯಲ್ಲಿ ದೂರು ದಾಖಲಾಗಿದೆ. ನಾಪತ್ತೆಯಾದ ವೃದ್ಧನನ್ನುಕಿಟ್ಟಣ್ಣ ಆಚಾರ್ಯ(80) ಎಂದು ಗುರುತಿಸಲಾಗಿದೆ.

ಕಿಟ್ಟಣ್ಣ ಆಚಾರ್ಯ ಸೆ. 11ರಂದು ರಂದು ಸಂಜೆ 6 ಗಂಟೆಗೆ ಶಾಂತಿ ಪಲ್ಕೆ ಯಲ್ಲಿರುವ ತನ್ನ ಮನೆಯಿಂದ ಹೋದವರು ವಾಪಾಸು ಮನೆಗೆ ಬಂದಿರುವುದಿಲ್ಲ.ಅವರ ಎತ್ತರ 5 ಅಡಿ 1 ಇಂಚು, ಎಣ್ಣೆಕಪ್ಪು ಮೈಬಣ್ಣ, ತಲೆ ಸ್ವಲ್ಪ ಬೋಳ್ ಆಗಿರುತ್ತದೆ. ತುಳು ಕನ್ನಡ ಭಾಷೆ ಮಾತನಾಡುತ್ತಾರೆ.

ಕಾವಿ ಬಣ್ಣದ ಲುಂಗಿ ಕೆಂಪುಬಣ್ಣದ ಬೈರಾ ಸನ್ನು ಸುತ್ತಿರುತ್ತಾರೆ. ಮಾನಸಿಕ ಅಸ್ವಸ್ಥರಾಗಿ ರುತ್ತಾರೆ. ಈ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಿದವರು ಮುಲ್ಕಿ ಪೊಲೀಸ್ ಠಾಣೆಗೆ ಅಥವಾ ಈ ಕೆಳಗೆ ಕಾಣಿಸಿದ ಮೊಬೈಲ್ ನಂಬರ್ ಗಳಿಗೆ ಸಂಪರ್ಕಿಸಬೇಕಾಗಿ ಮುಲ್ಕಿ ಠಾಣೆಯ ಪೊಲೀಸರು ತಿಳಿಸಿದ್ದಾರೆ. 0824-2290533,9844280168,7483460138

Edited By : PublicNext Desk
Kshetra Samachara

Kshetra Samachara

12/09/2021 08:30 pm

Cinque Terre

9.58 K

Cinque Terre

0