ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: " ನಾವು ಮದುವೆಗೆ ಹಲವು ವರ್ಷ ಕಾದೆವು" ಪ್ರಿಯಕರನಿಂದ ಕೊಲೆಯಾದ ಸೌಮ್ಯಶ್ರೀ ಮನೆಯವರು!

ಉಡುಪಿ: ಉಡುಪಿಯಲ್ಲಿ ಐದು ದಿನಗಳ ಹಿಂದೆ ಪ್ರಿಯಕರನೊಬ್ಬ ಪ್ರಿಯತಮೆಯನ್ನು ಕೊಲೆಗೈದು ,ತಾನೂ ಕೂಡ ಇರಿದುಕೊಂಡು ಆತ್ಮಹತ್ಯೆ ಮಾಡಿದ್ದ.ಕೃಷ್ಣನಗರಿಯಲ್ಲಿ ನಡೆದ ಈ ಭಗ್ನ ಪ್ರೇಮ ಕಹಾನಿಗೆ ಜನತೆ ಬೆಚ್ಚಿ ಬಿದ್ದಿದ್ದರು.

ಇವತ್ತು ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ವಿವರಣೆ ನೀಡಿದ ,ಕೊಲೆಯಾದ ಸೌಮ್ಯಶ್ರೀ ಭಂಡಾರಿ ಮನೆಯವರು ,ಸಂದೇಶ್ ಕುಲಾಲ್ ಎಂಬಾತ ಸೌಮ್ಯಶ್ರೀಯನ್ನು ಪ್ರೀತಿಸುತ್ತಿದ್ದ.ಇದು ನಮ್ಮ ಗಮನಕ್ಕೂ ಬಂದಿತ್ತು. ಅವರಿಬ್ಬರದು ತುಂಬ ವರ್ಷಗಳ ಪ್ರೀತಿ.ನಾವು ಅವರ ಪ್ರೀತಿಗೆ ಅಡ್ಡಿ ಪಡಿಸಿರಲಿಲ್ಲ.ಇಬ್ಬರಿಗೂ ಮದುವೆ ಮಾಡಿಬಿಡುವ ನಿರ್ಧಾರಕ್ಕೆ ನಾವು ಬಂದಿದ್ದೆವು.ಆದರೆ ಈಗ ಇಬ್ಬರೂ ಸಾವನ್ನಪ್ಪಿದ್ದಾರೆ.ಸೋಶಿಯಲ್ ಮೀಡಿಯಾಗಳಲ್ಲಿ ನಮ್ಮನೆ ಹುಡುಗಿ ಸೌಮ್ಯಶ್ರೀ ಬಗ್ಗೆ ಇಲ್ಲಸಲ್ಲದ ಆರೋಪ ಹೊರಿಸಲಾಗುತ್ತಿದೆ ,ಇದರಿಂದ ನಮಗೆ ತುಂಬ ಬೇಸರವಾಗಿದೆ ಎಂದು ಅಳಲು ತೋಡಿಕೊಂಡಿ ದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ‌ ಮಾತನಾಡಿದ ಕೊಲೆಯಾದ ಸೌಮ್ಯಶ್ರೀ ಅತ್ತಿಗೆ ದೀಕ್ಷಿತಾ ,ನಾವು ಅವರಿಬ್ಬರಿಗೂ‌ ಮದುವೆ ಮಾಡಲು ಕಾದೆವು.ಆದರೆ ಸಂದೇಶ್ ಕುಲಾಲ್ ನೆಪ ಹೇಳಿ ಮದುವೆ ಮುಂದೆ ಹಾಕುತ್ತಲೇ ಇದ್ದ.ಅವಳಿಗೀಗ 28 ವರ್ಷ .ಇನ್ನು ಕಾಯುವುದು ಬೇಡ ಎಂದು ನಿರ್ಧರಿಸಿದೆವು.ತಂದೆಗೂ ಹಾರ್ಟ್ ಅಟ್ಯಾಕ್ ಆದ ಕಾರಣ ,ಮಗಳ ಮದುವೆ ನೋಡುವ ಆಸೆ ಅವರಿಗಿತ್ತು.ಅವಳಿಗೆ ಮದುವೆ ಮಾಡಿ,ನಾನದನ್ನು ನೋಡಬೇಕು ಎಂದು ಇಚ್ಛೆ ವ್ಯಕ್ತಪಡಿಸಿದ್ದರು.ಹಾಗಾಗಿ ಅವಳಿಗೆ ಅನಿವಾರ್ಯವಾಗಿ ಬೇರೆ ಗಂಡು ನೋಡಿ ಮದುವೆ ನಿಶ್ಚಿತಾರ್ಥ ನಡೆಸಿದೆವು.ಇದರಲ್ಲಿ ಸೌಮ್ಯಶ್ರೀ ಯ ಯಾವ ತಪ್ಪೂ ಇಲ್ಲ. ನಿಶ್ಚಿತಾರ್ಥಕ್ಕೂ ಮುನ್ನ ಪೊಲೀಸ್ ಠಾಣೆಯಲ್ಲಿ ಅವಳ ಸುದ್ದಿಗೆ ನಾನು ಬರುವುದಿಲ್ಲ ಎಂದು ಮುಚ್ಚಳಿಕೆಯನ್ನೂ ಬರೆದು ಕೊಟ್ಟಿದ್ದ.ಇಷ್ಟಾದರೂ ಅವಳನ್ನೂ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ.ಈಗ ಸೋಶಿಯಲ್ ಮೀಡಿಯಾದಲ್ಲಿ ಹುಡುಗಿ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತದೆ.ಇದರಿಂದ ನಮ್ಮ ಮನಸಿಗೆ ತುಂಬ ನೋವಾಗಿದೆ ಎಂದು‌ ಮನೆಯವರು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕೊಲೆಯಾದ ಸೌಮ್ಯಶ್ರೀ ತಾಯಿ ಸುಶೀಲಾ ,ಅತ್ತಿಗೆ ದೀಕ್ಷಿತಾ ,ಅಣ್ಣಂದಿರಾದ ಸುನಿಲ್ ಮತ್ತು ಯತೀಶ್ ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

04/09/2021 02:54 pm

Cinque Terre

13.87 K

Cinque Terre

1