ಮಂಗಳೂರು: ನಗರದ ಪೊಲೀಸ್ ಇನ್‌ಸ್ಪೆಕ್ಟರ್ ಒಬ್ಬರ ಪುತ್ರನ 25 ಸಾವಿರ ರೂ. ಮೌಲ್ಯದ ಸೈಕಲ್ ಅನ್ನೇ ಕಳ್ಳನೋರ್ವ ಕಳವುಗೈದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕಳ್ಳನ ಕಳ್ಳತನದ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸುರತ್ಕಲ್ ವೃತ್ತ ನಿರೀಕ್ಷಕರಾಗಿರುವ ಶರೀಫ್ ನಗರದ ಉರ್ವ ಮಾರುಕಟ್ಟೆ ಬಳಿಯಿರುವ ಚೈತನ್ಯ ಅಪಾರ್ಟ್‌ಮೆಂಟ್‌ನಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಇದೇ ಕಟ್ಟಡದ ಪಾರ್ಕಿಂಗ್ ಸ್ಥಳದಲ್ಲಿ ಅವರ ಪುತ್ರನ ಸೈಕಲ್ ಅನ್ನು ಇರಿಸಲಾಗಿತ್ತು. ಆದರೆ ಖದೀಮ ಕಳ್ಳನೋರ್ವ ಈ ಸೈಕಲ್ ಅನ್ನು ಕಳವುಗೈದಿದ್ದಾನೆ. ಆರೋಪಿಯ ಚಹರೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದೇ ಶಂಕಿತ ಆರೋಪಿ ಅದೇ ದಿನ ಪಕ್ಕದ ಇನ್ನೊಂದು ಅಪಾರ್ಟ್‌ಮೆಂಟ್ ಗೂ ನುಗ್ಗಿದ್ದು, ಅಲ್ಲಿ ಕಳವಿಗಾಗಿ ಹುಟುಕಾಟ ನಡೆಸಿದ್ದಾನೆ. ಈ ದೃಶ್ಯ ಕೂಡಾ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಸೈಕಲ್ ಕದ್ದ ಕಳ್ಳನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Kshetra Samachara
29/08/2021 09:07 am