ಬಂಟ್ವಾಳ: ತಾಲೂಕಿನ ವಿಟ್ಲ ಸಮೀಪ ಕೊಳ್ನಾಡು ಖಂಡಿಗ ಎಂಬಲ್ಲಿ ಕಾಳೇಶ್ವರ ಸ್ವಾಮೀ ಎಂಬಾತನಿಂದ ಸ್ವಂತ ಮಗಳು, ಅಳಿಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ.
ಸುರೇಶ್ ಪ್ರಭು ಯಾನೆ ಕಾಳೇಶ್ವರ ಸ್ವಾಮಿ ( 57 ), ಶಿವಾನಂದ ಕಾಮತ್ (33 ), ಚಂದ್ರ (30) ಬಂಧಿತರು. ಆಸ್ತಿ ವಿವಾದ ಘಟನೆಗೆ ಕಾರಣ ಎನ್ನಲಾಗಿದೆ. ಈ ಕುರಿತು ಕಾಳೇಶ್ವರ ಸ್ವಾಮಿ ಮಗಳು ಕಿರಣ ದೂರು ನೀಡಿದ್ದು, ಸುಳ್ಯ ತಾಲೂಕಿನ ಅಲಟ್ಟಿ ಗ್ರಾಮದಲ್ಲಿ ವಾಸವಾಗಿರುವ ಪತಿ ಚೇತನ ಜೊತೆ ಶುಕ್ರವಾರ ತನ್ನ ತವರು ಮನೆಯಾದ ಖಂಡಿಗಕ್ಕೆ ಬಂದಿದ್ದ ಸಂದರ್ಭ ತಂದೆ ಸುರೇಶಪ್ರಭು ಯಾನೆ ಕಾಳೇಶ್ವರ ಸ್ವಾಮಿ, ತಾಯಿ ಸುಮತಿ, ಶಿವಾನಂದ ಕಾಮತ್, ಆತನ ಹೆಂಡತಿ ಜಯಲಕ್ಷ್ಮೀ ಇತರರು ಸೇರಿಕೊಂಡು, ಚೇತನ್ ಗೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ವಾಹನದಲ್ಲಿ ಗಂಡನನ್ನು ವಿಟ್ಲ ಆಸ್ಪತ್ರೆಗೆ ಕರೆದುಕೊಂಡ ಬಂದು ಪ್ರಥಮ ಚಿಕಿತ್ಸೆ ನೀಡಿ ನಂತರ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಐಸಿಯುನಲ್ಲಿ ದಾಖಲಾಗಿದ್ದಾರೆ ಎಂದು ಹೇಳಿದ್ದಾರೆ. ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Kshetra Samachara
28/08/2021 04:11 pm