ಉಪ್ಪಿನಂಗಡಿ-ಕಡಬ ಮುಖ್ಯ ರಸ್ತೆಯ ಕಳಾರ ಎಂಬಲ್ಲಿ ಇಂದು ಮುಂಜಾನೆ ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದ ಕಡಬ ಪೊಲೀಸರು ಒರ್ವ ಆರೋಪಿಯನ್ನು ಬಂಧಿಸಿ,ದನದ ಮಾಂಸ ಸೇರಿದಂತೆ ಸ್ವತ್ತುಗಳನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.
ಕಡಬ ತಾಲೂಕಿನ ಕಳಾರ ಎಂಬಲ್ಲಿ ಮಹಮ್ಮದ್ ಇಸ್ಮಾಯಿಲ್ ಎಂಬವರ ಪಾಳು ಬಿದ್ದ ಮನೆಯ ಹಿಂಬದಿಯ ಶೆಡ್ ನಲ್ಲಿ ಅಕ್ರಮವಾಗಿ ದನದ ಮಾಂಸ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕಡಬ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಮಯದಲ್ಲಿ ಅಕ್ರಮವಾಗಿ ದನವನ್ನು ಕಡಿದು ಮಾಂಸ ಮಾಡುತ್ತಿದ್ದ ಮೂವರು ವ್ಯಕ್ತಿಗಳು ಓಡಿ ಪರಾರಿಯಾಗಲು ಯತ್ನಿಸಿದ್ದು,ಇವರಲ್ಲಿ ಅಬ್ದುಲ್ ರಹಿಮಾನ್ ಎಂಬಾತನನ್ನು ಪೊಲೀಸರು ಬೆನ್ನಟ್ಟಿ ಹಿಡಿದು ವಶಕ್ಕೆ ಪಡೆದಿದ್ದಾರೆ. ಇಲ್ಲಿ ಹಲವಾರು ಸಮಯಗಳಿಂದ ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೇ ದನ ಹಾಗೂ ಕರುಗಳನ್ನು ಕಡಿದು ಮಾಂಸ ಮಾಡುತ್ತಿರುವ ಬಗ್ಗೆ ಆರೋಪ ಕೇಳಿಬಂದಿತ್ತು.ದಾಳಿ ಸಮಯದಲ್ಲಿ ಪ್ಲಾಸ್ಟಿಕ್ ಟಾರ್ಪಾಲಿನಲ್ಲಿದ್ದ ಸುಮಾರು 40 ಕೆ.ಜಿ ಯಷ್ಟು ದನದ ಮಾಂಸ , ದನದ ನಾಲ್ಕು ಕಾಲುಗಳು (ಕಳೆಬರಹ) ,ಒಂದು ಎಲೆಕ್ಟ್ರಾನಿಕ್ ತೂಕಮಾಪನ, ಎರಡು ಕಬ್ಬಿಣದ ಸತ್ತಾರ್ ಕತ್ತಿಗಳು,ಮೂರು ಕಬ್ಬಿಣದ ಚೂರಿಗಳು ,ಶೆಡ್ ನ ಹೊರಗಡೆ ಕಟ್ಟಿಹಾಕಿದ್ದ ನಾಲ್ಕು ದನದ ಕರುಗಳು ಸೇರಿದಂತೆ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಅಬ್ದುಲ್ ರಹಿಮಾನ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ಮಹಮ್ಮದ್ ಶರೀಫ್ ಮತ್ತು ಮಹಮ್ಮದ್ ಮುಸ್ತಫಾ ಎಂಬವರು ಓಡಿ ಪರಾರಿಯಾಗಿದ್ದಾರೆ. ಸ್ವಾಧೀನಪಡಿಸಿಕೊಂಡ ಮಾಂಸ ಹಾಗೂ ಜೀವಂತ ದನದ ಕರುಗಳ ಮತ್ತು ಸ್ವತ್ತುಗಳ ಅಂದಾಜು ಮೌಲ್ಯ 19.500 / ಎನ್ನಲಾಗಿದೆ.
Kshetra Samachara
27/08/2021 10:41 pm