ಮಂಗಳೂರು: ಮಗಳು, ಅಳಿಯನ ಮೇಲೆ ಮಾರಣಾಂತಿಕ ಹಲ್ಲೆಗೈದು ಕೊಲೆಯತ್ನ ನಡೆಸಿರುವ ಘಟನೆ
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ನಡೆದಿದೆ.
ಜಮೀನು ವಿವಾದವೇ ಕೊಲೆ ಯತ್ನಕ್ಕೆ ಕಾರಣವಾಗಿದ್ದು, ಸುರೇಶ್ ಪ್ರಭು ಯಾನೆ ಕಾಳೀಶ್ವರ ಸ್ವಾಮಿ ಮತ್ತು ಆತನ ಐದು ಜನರ ತಂಡ
ದಾಳಿ ನಡೆಸಿದೆ. ಕಿರಣ ಮತ್ತು ಆಕೆಯ ಪತಿ ಸುಳ್ಯ ಅಲೆಟ್ಟಿಯ ಪಟಕ್ಕುಂಜ ನಿವಾಸಿ ಚೇತನ್ ನಾಯಕ್ ಮೇಲೆ ದೊಣ್ಣೆ, ಕಬ್ಬಿಣ ರಾಡ್ ಮತ್ತು ಮಾರಕಾಸ್ತ್ರಗಳಿಂದ ಕಾಳೀಮಾತೆಯ ದೇವಸ್ಥಾನ ಎದುರಿನ ರಸ್ತೆಯಲ್ಲೇ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ್ದಾರೆ.
ರಕ್ತದ ಮಡುವಿನಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದ ಚೇತನನ್ನು ಸ್ಥಳೀಯರು ವಿಟ್ಲ ಸಮುದಾಯ ಆಸ್ಪತ್ರೆಗೆ ಕೊಂಡೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನಾ ಸ್ಥಳಕ್ಕೆ ಹೊಯ್ಸಳ ಪೊಲೀಸರು ಆಗಮಿಸಿದ್ದಾರೆ
Kshetra Samachara
27/08/2021 10:26 pm