ಮಂಗಳೂರು:ಮಹಾನಗರಗಳಲ್ಲಿ ಕೇಳಿ ಬರುತ್ತಿದ್ದ ವೀಡಿಯೋ ಟ್ರ್ಯಾಪ್ ಜಾಲ ಇದೀಗ ಹಳ್ಳಿಗೂ ಕಾಲಿಟ್ಟಿದೆ. ಹೌದು. ಯುವತಿಯ ಮೋಹಕ ಮಾತಿಗೆ ಬಲಿಯಾಗಿ ವೀಡಿಯೋ ಕಾಲ್ ನಲ್ಲಿ ಬಟ್ಟೆ ಬಿಚ್ಚಿದ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಆಟೋ ಚಾಲಕನ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕಡಬ ಸಮೀಪದ ಬಿಳಿನೆಲೆಯಲ್ಲಿ ಆಟೋ ಚಾಲಕನಾಗಿರುವ ಯುವಕನಿಗೆ ಯುವತಿಯೊಬ್ಳು ನಗ್ನವಾಗಿ ವೀಡಿಯೋ ಕಾಲ್ ಮಾಡಿದ್ದಾಳೆ. ಇತ್ತ ಈ ಕಡೆಯಿಂದಲೂ ಯುವಕ ಕೂಡಾ ಬಟ್ಟೆ ಬಿಚ್ಚಿದ್ದಾನೆ. ರಾತ್ರಿ ಹೊತ್ತು ನಡೆದ ಈ ಸಂಭಾಷಣೆಯ ವೀಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Kshetra Samachara
27/08/2021 03:17 pm