ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಂಕರನಾರಾಯಣ :ದಲಿತ ಕಾರ್ಮಿಕನ ಮೇಲೆ ಕೆಮಿಕಲ್ ಎರಚಿ ಹಲ್ಲೆ! ಆರೋಪಿಯ ಬಂಧನ

ಶಂಕರನಾರಾಯಣ: ತೋಟದಲ್ಲಿ ಕೆಲಸ ಮಾಡುತ್ತಿದ್ದ ದಲಿತ ಕೂಲಿ ಕಾರ್ಮಿಕರೊಬ್ಬರ ಮೇಲೆ ಆ್ಯಸಿಡ್‌ನಂತಹ ವಿಷಪೂರಿತ ಕೆಮಿಕಲ್ ಎರಚಿ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ.ಈ ಸಂಬಂಧ ಓರ್ವನನ್ನು ಬಂಧಿಸಲಾಗಿದ್ದು ಉಳಿದ ಆರೋಪಿಗಳಿಗಾಗಿ ಶೋಧ ನಡೆದಿದೆ.

ಹಳ್ಳಿಹೊಳೆ ಗ್ರಾಮದ ಕೊಳೆಕೋಡು ಎಂಬಲ್ಲಿ ಈ ಘಟನೆ ನಡೆದಿದೆ.ಹಲ್ಲೆಯಿಂದ ಗಾಯಗೊಂಡಿರುವ ಮುದೂರು ಗ್ರಾಮದ ಶೇಡಿಗುಂಡಿ ನಿವಾಸಿ ವೆಂಕಟರಮಣ(35)ಅವರು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವರು ಕೊಳೆಕೋಡುವಿನಲ್ಲಿನ ಲಕ್ಷ್ಮೀನಾರಾಯಣ ಚಾತ್ರ ಎಂಬವರ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಜಮೀನಿನ ವೈಷಮ್ಯಕ್ಕೆ ಸಂಬಂಧಿಸಿ ಆರೋಪಿಗಳಾದ ಸುಷ್ಮಾ ಚಾತ್ರ, ಶೈಲಜಾ ಚಾತ್ರ, ಗ್ರೀಷ್ಮಾ ಚಾತ್ರ, ವಿಜೇಂದ್ರ ಚಾತ್ರ, ಸುಮಾ ವಿಜೆಂದ್ರ ಚಾತ್ರ ಎಂಬವರು ಅಡಿಕೆ ತೋಟಕ್ಕೆ ಬಂದು ವೆಂಕಟ ರಮಣಗೆ ಅವಾಚ್ಯ ಶಬ್ದದಿಂದ ಬೈದರೆನ್ನಲಾಗಿದೆ. ಇದೇ ವೇಳೆ ಸುಷ್ಮಾ ಚಾತ್ರ ವಿಷ ಪೂರಿತ ಕೆಮಿಕಲ್ ಹಿಡಿದಕೊಂಡು ಬಂದು ವೆಂಕಟರಮಣ ಮೈಮೇಲೆ ಎರಚಿದ್ದಾರೆ.

ಉಳಿದವರು ದೊಣ್ಣೆಯಿಂದ ಹಾಗೂ ಕೈಯಿಂದ ಹಲ್ಲೆ ಮಾಡಿ ಕಾಲಿನಿಂದ ತುಳಿದಿರುವುದಾಗಿ ವೆಂಕಟರಮಣ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ವಿಜೇಂದ್ರ ಚಾತ್ರ ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

20/08/2021 08:50 pm

Cinque Terre

20.74 K

Cinque Terre

1