ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಬುಕಳ: ಎಟಿಎಂ ದರೋಡೆಗೆ ಯತ್ನ

ಕೋಟ: ಬ್ರಹ್ಮಾವರ ಸಮೀಪದ ಮಾಬುಕಳದಲ್ಲಿರುವ ಕೆನರಾ ಬ್ಯಾಂಕ್ ಎ.ಟಿ.ಎಂ.ನಿಂದ ಹಣ ದರೋಡೆಗೆ ಯತ್ನಿಸಿದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.

ಎ.ಟಿ.ಎಂ. ರಾತ್ರಿ ಕೂಡ ತೆರೆದಿದ್ದು ಸಿ.ಸಿ. ಟಿವಿಯ ವೈಯರ್ ಕಡಿತಗೊಳಿಸಿ ಒಳನುಗ್ಗಿದ ದುಷ್ಕರ್ಮಿಗಳು ಯಂತ್ರವನ್ನು ಒಡೆದು ಹಣದೋಚಲು ಯತ್ನಿಸಿದರೆ ಹಾಗೂ ಒಳಗಡೆ ಇದ್ದ ಎ.ಸಿ.ಯನ್ನು ಕದ್ದೊಯ್ಯಲು ವಿಫಲ ಯತ್ನ ನಡೆಸಿದ್ದಾರೆ.

ಗ್ರಾಹಕರೋರ್ವರು ಇಂದು ಬೆಳಗ್ಗೆ ಹಣ ನಗದೀಕರಿಸಲು ಬಂದಾಗ ಘಟನೆ ಬೆಳಕಿಗೆ ಬಂದಿದ್ದು ತತ್‍ಕ್ಷಣ ಕೋಟ ಪೊಲೀಸ್ ಠಾಣೆಗೆ ವಿಷಯ ತಿಳಿಸಲಾಯಿತು. ಇದೀಗ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಯಂತ್ರದಲ್ಲಿ ಠೇವಣಿ ಮಾಡಲಾದ ಹಣ ಹಾಗೂ ನಗದೀಕರಿಸಲ್ಪಟ್ಟ ಹಣದ ಲೆಕ್ಕಚಾರ ನಡೆಯುತ್ತಿದ್ದು ಕಳವಾದ ಬಗ್ಗೆ ಸ್ಪಷ್ಟ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ಎ.ಟಿ.ಎಂ.ಗೆ ಭದ್ರತಾ ಸಿಬಂದಿ ನೇಮಿಸದಿರುವ ಕಾರಣ ದುಷ್ಕರ್ಮಿಗಳಿಗೆ ಕೃತ್ಯವೆಸಗಲು ಸಹಕಾರಿಯಾಗಿದೆ. ಉಡುಪಿ ಎ.ಎಸ್.ಪಿ. ಸುಧಾಕರ್ ನಾಯಕ್, ಬ್ರಹ್ಮಾವರ ವೃತನಿರೀಕ್ಷಕ ಆನಂತಪದ್ಮನಾಭ, ಕೋಟ ಠಾಣಾ ಉಪನಿರೀಕ್ಷಕ ಸಂತೋಷ್ ಬಿ.ಪಿ. ಬ್ರಹ್ಮಾವರ ಠಾಣೆ ಉಪನಿರೀಕ್ಷಕ ಗುರುನಾಥ ಹಾದಿಮನೆ ಹಾಗೂ ಸಿಬಂದಿಗಳು, ಬೆರಳಚ್ಚು ತಂಡದವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಬ್ಯಾಂಕ್‌ ಸೀನಿಯರ್ ಮ್ಯಾನೇಜರ್ ಮನೋಜ್ ಕಾಮತ್, ಎ.ಜಿ.ಎಂ. ಜಗದೀಶ್ ಶೆಣೈ, ಶಾಖಾ ಪ್ರಬಂಧಕಿ ಶಿಲ್ಪಾ ಅವರು ಸ್ಥಳಕ್ಕಾಗಮಿಸಿ ಪೊಲೀಸರಿಗೆ ಅಗತ್ಯ ಮಾಹಿತಿ ನೀಡುತ್ತಿದ್ದಾರೆ.

Edited By : Shivu K
Kshetra Samachara

Kshetra Samachara

13/08/2021 12:25 pm

Cinque Terre

22.93 K

Cinque Terre

0

ಸಂಬಂಧಿತ ಸುದ್ದಿ