ಬೆಳ್ತಂಗಡಿ: ಉದ್ಯೋಗ ಕೊಡಿಸುವ ಆಮಿಷ ಒಡ್ಡಿದ ಆನ್‌ಲೈನ್ ಖದೀಮರು ಬೆಳ್ತಂಗಡಿ ತಾಲೂಕಿನ ಚರ್ಚ್ ರಸ್ತೆಯ ಮಹಿಳೆಗೆ 5.61 ಲಕ್ಷ ರೂ. ವಂಚಿಸಿದ್ದಾರೆ.
ಕಲ್ಕಣಿ ಜಾನ್ಸ್ ವೀವ್ ನಿವಾಸಿ ರವಿಶಂಕರ್ ಡಿ.ಕೆ. ಅವರ ಪತ್ನಿ ಪೂರ್ಣಿಮಾ ಆರ್. ವಂಚನೆಗೊಳಗಾದ ಮಹಿಳೆ. ಖದೀಮರು ಪೂರ್ಣಿಮಾ ಅವರ ಮೊಬೈಲ್‌ಗೆ ಜೂನ್ 28ರಂದು ಅಪರಿಚಿತ 9324118159 ಸಂಖ್ಯೆಯಿಂದ ಕರೆ ಮಾಡಿ ನಾನು ಕಾರ್ತಿಕ್, ಪಾರ್ಟ್ ಟೈಮ್ ಕೆಲಸಕ್ಕೆ ತುರ್ತಾಗಿ ನೇಮಕಾತಿ ಮಾಡುತ್ತಿದ್ದು, ನೀವು ಪ್ರತಿದಿನ 3,000ದಿಂದ 8,000 ರೂ.ವರೆಗೆ ಗಳಿಸಬಹುದು ಎಂದು ಹೇಳಿದ್ದರು.
ಉದ್ಯೋಗಕ್ಕಾಗಿ (hhtps://wa.me/+917259213629) ಸಂಪರ್ಕಿಸುವಂತೆ ಸಂದೇಶ ಕಳುಹಿಸಲಾಗಿತ್ತು. ಇದನ್ನು ನಂಬಿದ್ದ ಮಹಿಳೆ ಅದೇ ಸಂಖ್ಯೆಗೆ ಸಂಪರ್ಕಿಸಿದಾಗ (hhtps://fun-earn.com/Home/Public/reg/smid/478150) ಲಿಂಕ್ ಕಳುಹಿಸಲಾಗಿದೆ. ಲಿಂಕ್‌ನಲ್ಲಿ ರಿಜಿಸ್ಟರ್ ಮಾಡಿದಾಗ ಪೂರ್ಣಿಮಾ ಖಾತೆಗೆ 100 ರೂ. ಜಮೆಯಾಗಿದೆ. ಅನಂತರ ಅಪರಿಚಿತ ವ್ಯಕ್ತಿ ಕಳುಹಿಸಿದ ವೆಬ್‌ಸೈಟ್‌ನಲ್ಲಿ ಮಹಿಳೆಗೆ ಒಂದೊಂದೇ ಟಾಸ್ಕ್ ನೀಡಿ 8 ಟಾಸ್ಕ್‌ಗಳ ಮೂಲಕ ಒಟ್ಟು 5,61,537 ರೂ. ವಂಚಿಸಿದ್ದಾನೆ.
ಈ ಸಂಬಂಧ ಪೂರ್ಣಿಮಾ ಆರ್ ಅವರು ಮಂಗಳೂರು ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Kshetra Samachara
10/08/2021 09:14 am