ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ ಸಾಗ್ ಎಂಬಲ್ಲಿ ಮಹಿಳೆ ಭಾನುವಾರ ಬೆಳಿಗ್ಗೆ ಆತ್ಮಹತ್ಯೆ ತಮ್ಮ ತಾಯಿ ಮನೆಯಲ್ಲಿ ಮಾಡಿಕೊಂಡ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಕೆರೆಕಾಡು ನಿವಾಸಿ ಕವಿತಾ ಶೆಟ್ಟಿಗಾರ್ (24) ಎಂದು ಗುರುತಿಸಲಾಗಿದೆ.
ಮೃತ ಮಹಿಳೆ ಕವಿತಾ ಆಷಾಢ ಮಾಸಕ್ಕೆ ಹಳೆಯಂಗಡಿಯ ಸಾಗ್ ಬಳಿಯ ತಾಯಿ ಮನೆಗೆ ಬಂದಿದ್ದು ಭಾನುವಾರ ಬೆಳಿಗ್ಗೆ ತಾಯಿ ಹಾಲು ತರಲು ಸೊಸೈಟಿಗೆ ಹೋದ ಸಂದರ್ಭ ಮನೆಯಲ್ಲಿ ತಂದೆ ಮತ್ತು ಅಣ್ಣ ಮಲಗಿದ್ದ ವೇಳೆಯಲ್ಲಿ ಏಕಾಏಕಿ ತನ್ನ ಕೋಣೆಯಲ್ಲಿ ಚೂಡಿದಾರ್ ಶಾಲಿನಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಹಿಳೆ ಮದುವೆಯಾಗಿ ಮೂರು ವರ್ಷವಾಗಿದ್ದು ಮುಲ್ಕಿ ಚರಂತಿಪೇಟೆ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕಿದ್ದು ಪತಿ ಮಂಗಳೂರಿನ ಹೋಟೆಲ್ ನಲ್ಲಿ ಕುಕ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ
ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Kshetra Samachara
01/08/2021 02:03 pm