ಮಂಗಳೂರು: ನಗರದ ನೀರುಮಾರ್ಗ ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿಗೆ ಜುಲೈ 20 ರಂದು ಕಿಡಿಗೇಡಿಗಳು ಗರ್ಭಗುಡಿಗೆ ಪಾದರಕ್ಷೆ ಧರಿಸಿ ನುಗ್ಗಿ ಕಳವುಗೈದಿರುದರಿಂದ ಪಾವಿತ್ರ್ಯತೆಗೆ ಧಕ್ಕೆ ಉಂಟುಮಾಡಿದೆ. ಆದ್ದರಿಂದ ಕಳವುಗೈದವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಮತ್ತು ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿಯ ಸದಸ್ಯರು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಕಳ್ಳತನ ಮಾಡಿದವರು ಪಾದರಕ್ಷೆಯನ್ನು ಧರಿಸಿ ಗರ್ಭಗುಡಿಗೆ ಪ್ರವೇಶಿಸಿರುವುದರಿಂದ ಭಕ್ತರ ಮನಸ್ಸಿಗೆ ಅಪಾರ ನೋವು ಉಂಟು ಮಾಡಿದೆ. ಶೀಘ್ರವಾಗಿ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಮನವಿದಲ್ಲಿ ತಿಳಿಸಲಾಗಿದೆ.
Kshetra Samachara
31/07/2021 07:40 pm