ಬೆಳ್ತಂಗಡಿ: ಮಂಗಳೂರಿನಿಂದ ಹಾಸನ ಕಡೆಗೆ ಕಲಿದ್ದಲು ತುಂಬಿದ ಪ್ರಯಾಣಿಸಿದ್ದ ಲಾರಿಗೆ ಬೆಂಕಿ ತಗುಲಿದ ಘಟನೆ ಚಾರ್ಮಾಡಿ ಚೆಕ್ ಪೊಸ್ಟ್‌ನಲ್ಲಿ ನಡೆದಿದೆ.
ಕೆಎ-44-192 ನಂಬರಿನ ಮಹಾಲಕ್ಷ್ಮಿ ಎಂಬ ಹೆಸರಿನ ಲಾರಿ ರಾತ್ರಿ ಚಾರ್ಮಾಡಿ ಘಾಟ್ ಪಾಸಾಗಲು ತಡವಾಗಿದ್ದರಿಂದ ಚೆಕ್ ಪೊಸ್ಟ್‌ನಲ್ಲಿ ನಿಲ್ಲುವಂತಾಗಿತ್ತು. ಆ ಲಾರಿಯಲ್ಲಿ ನಾಲ್ಕು ಜನ ನಿದ್ರಿಸುತ್ತಿದ್ದರು. ಆದರೆ ಮಧ್ಯ ರಾತ್ರಿ 2:30ರ ಸುಮಾರಿಗೆ ಕಲ್ಲಿದ್ದಲಿನ ಅಡಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಚೆಕ್‌ಪೊಸ್ಟ್ ನಲ್ಲಿದ್ದ ಧರ್ಮಸ್ಥಳ ಪೊಲೀಸರು ಲಾರಿಯಲ್ಲಿದ್ದ ನಾಲ್ಕು ಮಂದಿಯನ್ನು ಎಚ್ಚರಿಸಿದ್ದಾರೆ.
ಈ ಬಗ್ಗೆ ತಕ್ಷಣವೇ ಪೊಲೀಸರು ಮಾಹಿತಿ ನೀಡುತ್ತಿದ್ದಂತೆ ಬೆಳ್ತಂಗಡಿ ಅಗ್ನಿಶಾಮಕದಳವು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿನಂದಿಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಠಾಣಾಧಿಕಾರಿ ಎಂ.ಗೋಪಾಲ್, ಪ್ರಮುಖ ಅಗ್ನಿಶಾಮಕ ಕೃಷ್ಣ ನಾಯ್ಕ, ಚಾಲಕ ರತನ್, ಮಾರುತಿ ಟಿ.ಅರ್, ಚಾಕೋ.ಕೆ.ಜೆ , ವಿನೋದ್ ಪ್ರಮುಖ ಪಾತ್ರ ವಹಿಸಿದರು.
Kshetra Samachara
30/07/2021 09:50 am