ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಾಜಧಾನಿ ಜ್ಯುವೆಲ್ಲರ್ಸ್ ದರೋಡೆ ಪ್ರಕರಣ; ಆರೋಪಿಗಳು ಪರಾರಿ

ಮಂಗಳೂರು: ಮಂಜೇಶ್ವರದ ಹೊಸಂಗಡಿಯಲ್ಲಿರುವ ರಾಜಧಾನಿ ಜ್ಯುವೆಲ್ಲರ್ಸ್ ಗೆ ಸೋಮವಾರ ನಸುಕಿನ ವೇಳೆ ಕನ್ನ ಹಾಕಿರುವ ದರೋಡೆಕೋರ ಗ್ಯಾಂಗ್ ನ ಇನ್ನೋವಾ ಕಾರು ಹಾಗೂ 7.45 ಕೆಜಿ‌ ಬೆಳ್ಳಿಯ ಆಭರಣ ಹಾಗೂ ನಗದನ್ನು ಉಳ್ಳಾಲ ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.

ಉಳ್ಳಾಲ ದರ್ಗಾ ಹಾಗೂ ಬಾಬಾ ಬುಡನ್ ಗಿರಿಗೆ ತೆರಳಲು ಆರೋಪಿಗಳು ಇನ್ನೋವಾ ಕಾರನ್ನು ಸುರತ್ಕಲ್ ನ ಮುಸ್ತಾಫಾ ಎಂಬವರಿಂದ ಬಾಡಿಗೆ ಪಡೆದಿದ್ದರು. ಆದರೆ ಕಾರು ಉಳ್ಳಾಲಕ್ಕೆ ತೆರಳದೆ ಕೇರಳ ಕಡೆಗೆ ಚಲಿಸುತ್ತಿರುವುದು ಜಿಪಿಎಸ್ ಮೂಲಕ ಮುಸ್ತಫಾ ಖಚಿತ ಪಡಿಸಿದ್ದು, ಕೂಡಲೇ ಅವರು ಉಳ್ಳಾಲ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು. ಮಾಹಿತಿ ಪಡೆದ ಪೊಲೀಸರು ಸೋಮವಾರ ಮುಂಜಾನೆ 4.45 ರ ಸುಮಾರಿಗೆ ತಲಪಾಡಿ ಕೆ.ಸಿ.ರೋಡ್ ನಲ್ಲಿ ಗಸ್ತಿನಲ್ಲಿದ್ದರು. ಆಗ ದರೋಡೆಕೋರರಿದ್ದ ಇನ್ನೋವಾ ಕಾರನ್ನು ಉಳ್ಳಾಲ ಪೊಲೀಸ್ ಇನ್ ಸ್ಪೆಕ್ಟರ್ ಪ್ರದೀಪ್ ಹಾಗೂ ಸಿಬ್ಬಂದಿ ತಡೆದಿದ್ದಾರೆ.

ಈ ಸಂದರ್ಭ ಕಾರಿನಲ್ಲಿದ್ದ ಏಳು ಮಂದಿ ಆರೋಪಿಗಳು ಪೊಲೀಸರ ಮೇಲೆಯೇ ದಾಳಿ ನಡೆಸಲು ಯತ್ನಿಸಿದ್ದಾರೆ. ಪೊಲೀಸರು ಅವರ ಮೇಲೆ ಪ್ರತಿದಾಳಿ ನಡೆಸಿದಾಗ ದರೋಡೆಕೋರರು ಅಲ್ಲಿಂದ ಪಲಾಯನಗೈದಿದ್ದಾರೆ. ಪೊಲೀಸರು ಕಾರು ಸಹಿತ ದರೋಡೆಗೈದ 7.45 ಕೆಜಿ ಬೆಳ್ಳಿ ಆಭರಣ, 1.90 ಲಕ್ಷ ರೂ. ನಗದು, ಜ್ಯುವೆಲ್ಲರಿಯ ಡಿವಿಆರ್, ಖಾರದಪುಡಿ, ಕಬ್ಬಿಣದ ರಾಡ್, ಗ್ಯಾಸ್ ಕಟ್ಟರ್, ಇತರ ಮಾರಕಾಸ್ತ್ರ ಸೇರಿ 14.35 ಲಕ್ಷ ರೂ. ಸೊತ್ತನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.

Edited By : Nirmala Aralikatti
Kshetra Samachara

Kshetra Samachara

28/07/2021 04:51 pm

Cinque Terre

12.04 K

Cinque Terre

1