ಮಂಗಳೂರು: ದೀಪಕ್ ರಾವ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪಿಂಕಿ ನವಾಜ್ ಮೇಲೆ ತಲವಾರು ದಾಳಿ ನಡೆದ ಘಟನೆ ಮಂಗಳೂರಿನ ಸುರತ್ಕಲ್ ಬಳಿಯ ಕಾಟಿಪಳ್ಳ ಸೆಕೆಂಡ್ ಕ್ರಾಸ್ ನಲ್ಲಿ ನಡೆದಿದೆ.
ವಿರೋಧಿ ತಂಡ ಅಟ್ಟಾಡಿಸಿ ತಲವಾರು ದಾಳಿ ನಡೆಸಿದೆ. ಕಾಟಿಪಳ್ಳ ನಿವಾಸಿಯಾಗಿರುವ ಪಿಂಕಿ ನವಾಜ್ ರೌಡಿ ಶೀಟರ್ ಆಗಿದ್ದು, ರಸ್ತೆ ಬದಿ ನಿಂತಿದ್ದಾಗಲೇ ತಂಡ ತಲವಾರು ಬೀಸಿದೆ. ಆದರೆ, ನವಾಜ್ ಓಡಿ ತಪ್ಪಿಸಿಕೊಂಡಿದ್ದು ಬೆನ್ನು ಮತ್ತು ಕೈಗೆ ತೀವ್ರ ಗಾಯಗೊಂಡಿದ್ದಾನೆ. ಬಳಿಕ ಆತನನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಲ್ಕು ವರ್ಷಗಳ ಹಿಂದೆ ಹಾಡಹಗಲೇ ಕಾಟಿಪಳ್ಳ ಪೇಟೆಯ ಬಳಿ ದೀಪಕ್ ರಾವ್ ಅವರ ಕೊಲೆ ನಡೆದಿತ್ತು. ಅದರಲ್ಲಿ ಪಿಂಕಿ ನವಾಜ್ ಸೇರಿ ನಾಲ್ವರು ಆರೋಪಿಗಳಿದ್ದರು. ಕೊಲೆಯ ಬಳಿಕ ಅಲ್ಲಿಂದ ಪರಾರಿಯಾಗಿದ್ದು, ಪೊಲೀಸರು ವಿಷಯ ತಿಳಿದು ಫಾಲೋ ಮಾಡಿದ್ದರು. ಕಿನ್ನಿಗೋಳಿಯಿಂದ ಮೂಡುಬಿದ್ರೆ ಕಡೆಗೆ ಪರಾರಿಯಾಗುತ್ತಿದ್ದ ವೇಳೆ ಪೊಲೀಸರು ಅಡ್ಡಗಟ್ಟಿದ್ದರು. ಆರೋಪಿಗಳು ತಲವಾರು ಬೀಸಿದ್ದರಿಂದ ಪೊಲೀಸರು ಅವರ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು. ಈ ಪೈಕಿ ಪಿಂಕಿ ನವಾಜ್ ನ ಕಾಲಿಗೂ ಗುಂಡು ಬಿದ್ದಿತ್ತು.
Kshetra Samachara
10/02/2021 08:02 pm