ಮಂಗಳೂರು: ಸೈಡ್ ಕೊಡೋ ವಿಚಾರದಲ್ಲಿ ವಾಗ್ವಾದ ನಡೆದು ಬೈಕ್ ಸವಾರನೋರ್ವ ಖಾಸಗಿ ಬಸ್ ಚಾಲಕನ ಸಹಿತ ಬಸ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಘಟನೆ ಮಂಗಳೂರಿನ ಪಡೀಲ್ ಬಳಿ ರಾತ್ರಿ ನಡೆದಿದೆ.
ಸ್ಟೇಟ್ ಬ್ಯಾಂಕ್ ನಿಂದ ದಿನಾಲೂ ಫೈಸಲ್ ನಗರಕ್ಕೆ ಹೋಗುವ 23 ನಂಬರ್ ಖಾಸಗಿ ಬಸ್ ಹೋಗ್ತಿದ್ದಂತೆ ಅಶ್ರಫ್ ಎಂಬಾತ ಸೈಡ್ ಕೊಡೋ ವಿಚಾರದಲ್ಲಿ ಬಸ್ ಚಾಲಕನ ಜೊತೆಗೆ ವಾಗ್ವಾದ ನಡೆಸಿದ್ದಾನೆ. ತದನಂತರ ಬಸ್ ಫೈಸಲ್ ನಗರಕ್ಕೆ ಹೋಗಿ ವಾಪಸ್ ಬರ್ತಿದ್ದಂತೆಯೇ ಪಡೀಲ್ ಬಳಿ ಬೈಕ್ ಸವಾರ ಅಶ್ರಫ್, ಚಾಲಕ ಸಂಪತ್ ಪೂಜಾರಿ ಎಂಬವರ ಮೇಲೆಯೇ ಪೆಟ್ರೋಲ್ ಸುರಿದು ಕೊಲೆ ಯತ್ನ ನಡೆಸಿದ್ದಾನೆ. ಬಸ್ ಚಾಲಕ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಖತರ್ನಾಕ್ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
Kshetra Samachara
19/01/2021 10:21 pm