ಮಂಗಳೂರು: ನ್ಯೂ ಚಿತ್ರಾ ಜಂಕ್ಷನ್ ಬಳಿ ಡಿಸೆಂಬರ್ 16 ರಂದು ಕರ್ತವ್ಯ ನಿರತರಾಗಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ಕೊಲೆಗೆ ಯತ್ನಿಸಿದ್ದ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಅನೀಶ್ ಅಶ್ರಫ್, ಅಬ್ದುಲ್ ಖಾದರ್ ಫಹಾದ್, ಶೇಖ್ ಮಹಮ್ಮದ್ ಹ್ಯಾರೀಸ್ ಯಾನೆ ಜಿಗ್ರಿ, ಮಹಮ್ಮದ್ ಖಾಯೀಸ್ ಯಾನೆ ಖಾಯೀಸ್, ರಾಹಿಲ್ ಯಾನೆ ಚೋಟು ಲಾಹಿಲ್, ಮಹಮ್ಮದ್ ನವಾಜ್, ಬಂಧಿತರು.
ಈ ಕುರಿತು ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್, ಈ ಕೊಲೆ ಯತ್ನ ಪ್ರಕರಣದ ಹಿಂದೆ ಮಂಗಳೂರು ಗೋಲಿಬಾರ್ ರಿವೇಂಜ್ ಬಗ್ಗೆ ಮಾಹಿತಿ ದೊರಕಿದೆ. ಕಾನೂನು ಸುವ್ಯವಸ್ಥೆ ಬಗ್ಗೆ ಅಸಮಾಧಾನ ಹೊಂದಿದ್ದ ಈ ಆರೋಪಿಗಳು ಕುಕೃತ್ಯಕ್ಕೆ ಯತ್ನಿಸಿದ್ದಾರೆ. ಆರೋಪಿಗಳು ನೈಟ್ರೋವಿಟ್ ಟ್ಯಾಬ್ಲೆಟ್ ಬಳಸಿದ್ದು, ಕೃತ್ಯದ ಹಿಂದೆ ಎರಡು ಗ್ಯಾಂಗ್ ಭಾಗಿಯಾಗಿತ್ತು ಎಂದು ತಿಳಿಸಿದರು.
Kshetra Samachara
19/01/2021 02:12 pm