ದಕ್ಷಿಣ ಕನ್ನಡ: ಅಂತರ್ಜಾತಿ ಪ್ರೇಮ ವಿವಾಹ ವಿರೋಧಿಸಿದ್ದಕ್ಕೆ ಯುವಕನೊಬ್ಬ ಹೆತ್ತ ತಂದೆಯನ್ನೇ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗರ್ಡಡಿ ಗ್ರಾಮದ ಮುಂದೊಟ್ಟುನಲ್ಲಿ ನಡೆದಿದೆ.
ಬಡಿಗೆಯಿಂದ ಬಲವಾಗಿ ಹೊಡೆದು ಪುತ್ರ ಹರೀಶ್ ತನ್ನ ತಂದೆ ಶ್ರೀಧರ್(55) ಅವರನ್ನು ಕೊಲೆಗೈದಿದ್ದಾನೆ. ಸಂಗತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಆರೋಪಿ ಪುತ್ರ ಹರೀಶ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹರೀಶ್ ಬೆಂಗಳೂರಿನ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ, ಯುವತಿ ಬೇರೆ ಜಾತಿ ಅನ್ನುವ ಕಾರಣಕ್ಕೆ ತಂದೆ ಶ್ರೀಧರ್ ಇಬ್ಬರನ್ನೂ ಮನೆಗೆ ಸೇರಿಸಿರಲಿಲ್ಲ.
ತನ್ನನ್ನು ಮನೆಗೆ ಸೇರಿಸಲು ನಿರಾಕರಿಸಿದ ತಂದೆ ಜೊತೆ ಹರೀಶ್ ಹಲವಾರು ದಿನಗಳಿಂದ ಜಟಾಪಟಿ ನಡೆಸಿದ್ದಾನೆ. ಈ ವೇಳೆ, ಶ್ರೀಧರ್ ಜೊತೆ ಮಾತಿಗೆ ಮಾತು ಬೆಳೆದು ಹರೀಶ್ ತನ್ನ ತಂದೆಯನ್ನು ಹೊಡೆದು ಕೊಲೆಗೈದಿದ್ದಾನೆ.
Kshetra Samachara
19/01/2021 08:58 am