ಮಂಗಳೂರು: ಕರಾವಳಿಯಲ್ಲಿ ಖಾಸಗಿ ಬಸ್ ಗಳ ನಡುವೆ ಪೈಪೋಟಿ ಸಂಚಾರ ನಡೆಯೋದು ಸಾಮಾನ್ಯ. ಇಂದು ಕೂಡ ಉಡುಪಿ - ಮಂಗಳೂರು ಎಕ್ಸ್‌ಪ್ರೆಸ್ ಬಸ್ ಗಳ ನಡುವೆ ಪೈಪೋಟಿ ಸಂಚಾರ ನಡೆದು ನಿರ್ವಾಹಕ, ಚಾಲಕರ ನಡುವೆ ಮಾರಾಮಾರಿ ನಡೆದ ಘಟನೆ ನಡೆದಿರುವ ದೃಶ್ಯದ ವೀಡಿಯೊ ವೈರಲ್ ಆಗಿದೆ.
ಎಂಟು ಖಾಸಗಿ ಎಕ್ಸ್‌ಪ್ರೆಸ್ ಬಸ್ ಗಳ ನಡುವೆ ಪೈಪೋಟಿ ಸಂಚಾರ ನಡೆದಿದೆ. ಇದನ್ನು ಹಿಂದೆ ಇರುವ ಬಸ್ ನಲ್ಲಿ ಯಾರೋ ವೀಡಿಯೊ ಮಾಡಿದ್ದಾರೆ. ಬಳಿಕ ಒಂದು ಬಸ್ ನ ನಿರ್ವಾಹಕ ಹಾಗೂ ಚಾಲಕ ಮತ್ತೊಂದು ಬಸ್ ನ ನಿರ್ವಾಹಕ ಹಾಗೂ ಚಾಲಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವ, ಬಸ್ ಗೆ ಕಬ್ಬಿಣದ ಸ್ಟಿಕ್ ನಿಂದ ಬಡಿಯುವ ದೃಶ್ಯ ವೈರಲ್ ಆಗಿದೆ
Kshetra Samachara
12/01/2021 10:41 pm