ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನೆರೆಯಿಂದಾದ ಮನೆ ಹಾನಿ ಪರಿಶೀಲಿಸಲು ಹೋದಾಗ ಸಿಕ್ಕಿತು ಕೊಳೆತು ಹೋದ ಶವ!

ಮಲ್ಪೆ: ವ್ಯಕ್ತಿಯೊಬ್ಬರ ಶವ ಸಂಪೂರ್ಣ ಕೊಳೆತು, ಅಸ್ತಿಪಂಜರ ರೂಪದಲ್ಲಿ ಪತ್ತೆಯಾದ ಘಟನೆ ಕೆಮ್ಮಣ್ಣು ಸಮೀಪದ ಯಡಬೆಟ್ಟುನಲ್ಲಿರುವ ಮನೆಯಲ್ಲಿ ಇಂದು ಕಂಡು ಬಂದಿದೆ.

ವ್ಯಕ್ತಿ ಮೃತಪಟ್ಟು 40 ದಿನಗಳು ಕಳೆದಿರಬಹುದೆಂದು ಅಂದಾಜಿಸಲಾಗಿದೆ.

ಮೃತ ವ್ಯಕ್ತಿಯನ್ನು ಶೇಖರ ಪೂಜಾರಿ (55 )ಎಂದು ಗುರುತಿಸಲಾಗಿದೆ.‌ ಇವರು ಮುಂಬೈಯಲ್ಲಿ ಹೋಟೆಲ್ ಉದ್ಯೋಗದಲ್ಲಿದ್ದವರು, ಲಾಕ್ ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡು ಊರಿಗೆ ಬಂದು, ಕೂಲಿ ಕೆಲಸ ಮಾಡಿಕೊಂಡು ಒಂಟಿಯಾಗಿ ಮನೆಯಲ್ಲಿ ಜೀವನ ನಡೆಸುತ್ತಿದ್ದರು. ಮೃತ ವ್ಯಕ್ತಿಗೆ ಕುಡಿತದ ಚಟ ಇತ್ತು ಎಂಬ ಮಾಹಿತಿ ಸ್ಥಳೀಯರಿಂದ ತಿಳಿದುಬಂದಿದೆ.

ಉಡುಪಿಯಲ್ಲಿ ಕೆಲವು ದಿನಗಳ ಹಿಂದೆ ಸುರಿದ ಮಳೆಯಿಂದ ಪರಿಸರದಲ್ಲಿ ಬಹಳಷ್ಟು ಮನೆಗಳು ನೆರೆಗೆ ತುತ್ತಾಗಿದ್ದವು. ಮನೆ ಹಾನಿ ಪರಿಶೀಲಿಸಲು ಹೋದಾಗ ಈ ಶವ ಕಂಡುಬಂದಿದೆ.

ಮಲ್ಪೆ ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್ . ಹಾಗೂ ಸಿಬ್ಬಂದಿ ರಾಘವೇಂದ್ರ ಬಿ.ಕೆ., ಜಗದೀಶ್ ಕಾನೂನು ಪ್ರಕ್ರಿಯೆ ನಡೆಸುವಾಗ ಸ್ಥಳದಲ್ಲಿ ಹಾಜರಿದ್ದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಕಳೇಬರವನ್ನು ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲು, ಉಚಿತ ಅಂಬುಲೇನ್ಸ್ ಸೇವೆ ನೀಡಿ ಸಹಕರಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

28/09/2020 05:29 pm

Cinque Terre

29.77 K

Cinque Terre

0