ಉಡುಪಿ: ಉಡುಪಿಯ ಅಷ್ಟಮಠಗಳಲ್ಲೊಂದಾದ ಪುತ್ತಿಗೆ ಮಠದಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನದ ಗಿಂಡಿ ಕಳವಾದ ಬಗ್ಗೆ ದೂರು ದಾಖಲಾಗಿದೆ.
ಜು.26 ರಂದು ಬೆಳಿಗ್ಗೆ ಮಠದಲ್ಲಿ ಪೂಜೆ ಸಂದರ್ಭ 6 ಮಂದಿ ಮಠದ ವಿದ್ಯಾರ್ಥಿಗಳು ಮತ್ತು ಪುರೋಹಿತರು ಬಂದು ಹೋಗಿದ್ದು, ಪೂಜೆ ನಂತರ ಪೂಜಾ ಸಾಮಗ್ರಿ ನೋಡುವಾಗ 7 ಲಕ್ಷ ರೂ. ಮೌಲ್ಯದ 146 ಗ್ರಾಂ ತೂಕದ ಚಿನ್ನದ ಗಿಂಡಿ ಕಾಣೆಯಾಗಿದ್ದು ಗಮನಕ್ಕೆ ಬಂದಿದೆ.
ಮಠದ ವ್ಯವಸ್ಥಾಪಕ ವಿಷ್ಣುಮೂರ್ತಿ ಪೂಜೆಯ ನಂತರ ಸಾಮಗ್ರಿ ತೆಗೆದಿಡುವಾಗ ಪೂಜೆಗೆ ಬಳಸುವ 146 ಗ್ರಾಂ ತೂಕದ ಚಿನ್ನದ ಗಿಂಡಿ ಕಾಣೆಯಾಗಿದ್ದು, ತಿಳಿದು ಬಂತು.ಈ ಕುರಿತು ನಗರ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
PublicNext
30/07/2022 07:14 am