ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬೀದಿನಾಯಿ ಗುಂಪು ದಾಳಿ; ಗಾಯಾಳು ವಿದ್ಯಾರ್ಥಿನಿ ಭೇಟಿಯಾದ ನ್ಯಾ. ಶರ್ಮಿಳಾ

ಮಣಿಪಾಲ ಅಕಾಡೆಮಿ ಸ್ಕೂಲಿನ ವಿದ್ಯಾರ್ಥಿನಿ ಮೇಲೆ ಬೀದಿನಾಯಿಗಳ ಗುಂಪೊಂದು ಎರಗಿ ಗಂಭೀರವಾಗಿ ಗಾಯಗೊಳಿಸಿದ್ದು, ಬಾಲಕಿಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದು ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ನ್ಯಾಯಾಧೀಶೆ ಶರ್ಮಿಳಾ ಎಸ್. ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಆರೋಗ್ಯ ವಿಚಾರಿಸಿದ್ದಾರೆ.

ಒಂದನೇ ತರಗತಿಯ ಈ ವಿದ್ಯಾರ್ಥಿನಿಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ. ಬೀದಿ ನಾಯಿಗಳು ಬಾಲಕಿಯ ತಲೆಗೆ ಗಂಭೀರ ಗಾಯ ಮಾಡಿವೆ. ನ್ಯಾಯಮೂರ್ತಿ ಜೊತೆಗೆ ಸಮಾಜ ಸೇವಕ ನಿತ್ಯಾನಂದ ಒಳಕಾಡು ಮತ್ತಿತರರಿದ್ದರು. ಮಣಿಪಾಲ- ಪರ್ಕಳ ಭಾಗಗಳಲ್ಲಿ ಬೀದಿನಾಯಿ ಕಾಟ ಹೆಚ್ಚುತ್ತಿದ್ದು, ಶ್ವಾನ ಉಪಟಳಕ್ಕೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Edited By :
PublicNext

PublicNext

24/08/2022 08:23 pm

Cinque Terre

53.89 K

Cinque Terre

6

ಸಂಬಂಧಿತ ಸುದ್ದಿ