ಕೇರಳದಿಂದ ಅಕ್ರಮವಾಗಿ ಬರುವ ಬಾಕ್ಸೈಟ್ ಮಣ್ಣು ತುಂಬಿದ ಸುಮಾರು ಎಂಟು ಲಾರಿಗಳನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಟ್ಲದ ಕನ್ಯಾನ ಸಮೀಪದಲ್ಲಿ ಭಾರೀ ಮಣ್ಣು ಮಾಫಿಯಾ ನಡೆಯುತ್ತಿದ್ದು, ಈ ಬಗ್ಗೆ ಹಲವು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರೂ ಹಣದ ಹೊಳೆ ಸುರಿಸಿ, ಬಾಯಿ ಮುಚ್ಚಿಸಿದ್ದರು. ವಿಟ್ಲ ಮೂಲಕ ಅಕ್ರಮವಾಗಿ ಬಳ್ಳಾರಿ, ಸಂಡೂರಿಗೆ ಬಾಕ್ಸೈಟ್ ಸಾಗಿಸುತ್ತಿದ್ದ ಏಳು ಭಾರೀ ಸರಕು ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕಲ್ಲಡ್ಕ-ಕಾಂಞಂಗಾಡ್ ಅಂತರಾಜ್ಯ ಹೆದ್ದಾರಿಯಲ್ಲಿ ಭಾರಿ ಸರಕು ಲಾರಿಗಳ ಓಡಾಟವನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಸಾರಿಗೆ ಇಲಾಖೆ ಕೆಲ ವರ್ಷಗಳ ಹಿಂದೆಯೇ ನಿಷೇಧಿಸಿದೆ. ಹೀಗಿದ್ದರೂ ಅಧಿಕಾರಿಗಳ ಕೃಪಾಕಟಾಕ್ಷವೋ, ಕಣ್ಣಿಗೆ ಮಣ್ಣೆರಚಿಯೋ ಪ್ರತಿನಿತ್ಯ 12,14,18ಚಕ್ರಗಳ ಭಾರೀ ಸರಕು ಲಾರಿಗಳು ಯಾರ ಮುಲಾಜಿಲ್ಲದೇ ವಿಟ್ಲ ಮೂಲಕ ಕೇರಳ-ಕರ್ನಾಟಕ ಗಡಿಭಾಗದಿಂದ ರಾಜೋರೋಷವಾಗಿ ಸಂಚರಿಸುತ್ತಿವೆ. ಇದೇ ರಸ್ತೆಯಲ್ಲಿ ಈ ಹಿಂದೆ ಹತ್ತಕ್ಕೂ ಹೆಚ್ಚು ಅಪಘಾತಗಳು ನಡೆದು ಜನಸಾಮಾನ್ಯರು ಹೈರಾಣರಾಗಿದ್ದಾರೆ.
Kshetra Samachara
15/06/2022 12:21 pm