ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ತೋಕೂರು ಹಳ್ಳಕ್ಕೆ ಮತ್ತೆ ಎಂಆರ್ ಪಿಎಲ್ ಪೆಟ್ರೋ ಕೆಮಿಕಲ್ ತ್ಯಾಜ್ಯ ನೀರು‌; ಆಕ್ರೋಶಿತರಾದ ಸ್ಥಳೀಯರು

ಮಂಗಳೂರು: ಎಂಆರ್ ಪಿಎಲ್ ಮಾರಕ ಪೆಟ್ರೋ ಕೆಮಿಕಲ್ ತ್ಯಾಜ್ಯ ನೀರನ್ನು ನಗರದ ಫಲ್ಗುಣಿ ನದಿಯ ಉಪ ಶಾಖೆಯಾಗಿರುವ ತೋಕೂರು ಹಳ್ಳಕ್ಕೆ ಅಕ್ರಮವಾಗಿ ಹರಿಯಬಿಡುತ್ತಿದ್ದು, ಈ ಬಗ್ಗೆ ಸ್ಥಳೀಯರು ಸತತ ದೂರು ನೀಡುತ್ತಿದ್ದಾರೆ. ಆದರೆ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳದ ಪರಿಣಾಮ ಎಂಆರ್ ಪಿಎಲ್ ತ್ಯಾಜ್ಯ ನೀರನ್ನು ಹಳ್ಳಕ್ಕೆ ಬಿಡುತ್ತಿದೆ ಎಂದು ಸ್ಥಳೀಯರು ಆಕ್ರೋಶಿತರಾಗಿದ್ದಾರೆ.

ಎಂಆರ್ ಪಿಎಲ್ ಈ ರೀತಿ ಪೆಟ್ರೋ ಕೆಮಿಕಲ್ ತ್ಯಾಜ್ಯ ನೀರನ್ನು ಹರಿಯ ಬಿಡುವುದು ಇದೇ ಮೊದಲೇನಲ್ಲ. ಈ ರೀತಿಯ ಪರಿಸರ ಮಾರಕ ತ್ಯಾಜ್ಯ ನೀರು ಹರಿಯುವುದರಿಂದ ಜೋಕಟ್ಟೆ, ತೋಕೂರು, ಕಳವಾರು ಭಾಗದಲ್ಲಿ ಅಂತರ್ಜಲ ಕಲುಷಿತಗೊಂಡು ಕುಡಿಯುವ ನೀರಿನ ಬಾವಿ, ಕೆರೆಗಳು ಬಳಕೆಗೆ ಅಯೋಗ್ಯವಾಗಿದೆ. ಅಲ್ಲದೆ ಗ್ರಾಮಸ್ಥರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಐದು ವರ್ಷಗಳ ಹಿಂದೆ ಜನತೆಯ ಹೋರಾಟದ ಪರಿಣಾಮ ಸರಕಾರ ಹೊರಡಿಸಿರುವ ಆರು ಅಂಶಗಳ ಪರಿಹಾರ ಕ್ರಮಗಳನ್ನೂ ಜಾರಿಗೊಳಿಸಲು ಕಂಪೆನಿ ಹಿಂಜರಿಯುತ್ತಿದೆ.

ಸ್ಥಳೀಯರಿಗೆ ಉದ್ಯೋಗ ನೀಡಲು ನಿರಾಕರಿಸುವ ಎಂಆರ್ ಪಿಎಲ್ ತ್ಯಾಜ್ಯವನ್ನು ಮಾತ್ರ ಸ್ಥಳೀಯ ನದಿ, ಸಮುದ್ರಕ್ಕೆ ಹರಿಯಬಿಟ್ಟು ಜನತೆಯ ಬದುಕಿನೊಂದಿಗೆ ಆಟವಾಡುತ್ತಿದೆ ಎಂದು ಆಕ್ರೋಶಿತರಾಗಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

25/09/2021 10:49 pm

Cinque Terre

30.04 K

Cinque Terre

0