ಕುಂದಾಪುರ: ತಾಲೂಕಿನ ಕಾವ್ರಾಡಿ ಗ್ರಾಮದ ಹರೀಶ್ ಕುಲಾಲ್ (30) ಎಂಬ ಯುವಕ ಕೆಲವು ದಿನಗಳಿಂದ ಕಾಣೆಯಾಗಿದ್ದ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಒಂದಷ್ಟು ಪೋಸ್ಟ್ ಮಾಡಲಾಗಿತ್ತು. ಯುವಕನ ಫೋಟೊ ಪೋಸ್ಟ್ ಮಾಡಿ ಸಿಕ್ಕಿದ್ದಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸುವಂತೆ ಕೋರಲಾಗಿತ್ತು. ಸಂಬಂಧಪಟ್ಟವರ ನಂಬರ್ ಹಾಕಿ ಯುವಕ ಸಿಕ್ಕಿದ್ದಲ್ಲಿ ನಮಗೆ ತಿಳಿಸಿ ಎಂದು ಮನೆಯವರು ಪೋಸ್ಟ್ ಮಾಡಿದ್ದರು.
ಇದೀಗ ಈ ಯುವಕನ ಶವ ಮಂಗಳೂರಿನ ಪಣಂಬೂರು ಬೀಚ್ ನಲ್ಲಿ ಪತ್ತೆಯಾಗಿದೆ. ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ ಎನ್ನುವ ಶಂಕೆ ವ್ಯಕ್ತವಾಗಿದೆ. ಯುವಕ ಮಾನಸಿಕ ಅಸ್ವಸ್ಥನಾಗಿದ್ದು, ಕೆಲವು ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದಾನೆ. ಪಣಂಬೂರು ಸಮುದ್ರ ತೀರದಲ್ಲಿ ಸಿಕ್ಕ ಶವವನ್ನು ಪೊಲೀಸರು ಪರಿಶೀಲನೆ ಮಾಡಿದಾಗ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಸಿಕ್ಕಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟವರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
Kshetra Samachara
30/09/2020 11:41 am