ಮಂಗಳೂರು: ಎಟಿಎಂ ಕೊಠಡಿಯ ಬಾಗಿಲು ಗಾಜಿಗೆ ಕಲ್ಲೆಸೆದು ಜಖಂಗೊಳಿಸಿದಿರುವ ಯುವಕನ ಮೇಲಿನ ಆರೋಪ ಆರನೇ ಜೆಎಂಎಫ್ ಸಿ ನ್ಯಾಯಾಲಯದ ಸಾಬೀತಾಗಿರುವ ಹಿನ್ನೆಲೆಯಲ್ಲಿ 8ತಿಂಗಳ ಸಾಮಾನ್ಯ ಸಜೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.
2020ರ ಜುಲೈ 9ರಂದು ಮಠದಕಣಿ ನಿವಾಸಿ ಮನೀಶ್(20) ಎಂಬಾತ ಮಠದಕಣಿ ರಸ್ತೆಯ ಕೆನರಾ ಬ್ಯಾಂಕ್ ಎಟಿಎಂ ಕೊಠಡಿ ಗಾಜಿನ ಬಾಗಿಲಿಗೆ ಜಲ್ಲಿ ಕಲ್ಲು ಎಸೆದು ಜಖಂಗೊಳಿಸಿದ್ದ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿರುವ ಅಂದಿನ ಬರ್ಕೆ ಠಾಣಾ ಉಪನಿರೀಕ್ಷಕ ಹಾರೂನ್ ಅಖ್ತರ್ ಆರೋಪಿ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಆರನೇ ಜೆಎಂಎಫ್ ಸಿ ನ್ಯಾಯಾಲಯ ಎಲ್ಲಾ ಸಾಕ್ಷಿದಾರರ ವಿಚಾರಣೆ ನಡೆಸಿ ವಾದ - ವಿವಾದವನ್ನು ಆಲಿಸಿ ಆರೋಪಿ ಮನೀಶ್ ತಪ್ಪಿತಸ್ಥನೆಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಪೂಜಾಶ್ರೀ ಎಚ್.ಎಸ್. ಅವರು ಅಪರಾಧಿ ಮನೀಶ್ ಗೆ 8ತಿಂಗಳ ಸಾಮಾನ್ಯ ಸಜೆ ಹಾಗೂ 3,500 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.
ಸರಕಾರದ ಪರವಾಗಿ ಹಿರಿಯ ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ. ವಾದಿಸಿದ್ದಾರೆ.
PublicNext
17/09/2022 10:15 pm